ಪಾಕಿಸ್ತಾನದಲ್ಲಿ ಮತ್ತೆ ಇಬ್ಬರು ಉಗ್ರರ ನಿಗೂಢ ಸಾವು

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಪಾಕಿಸ್ತಾನ ಹಾಗೂ ಖಾಲಿಸ್ತಾನಿ ಉಗ್ರರನ್ನು ಒಬ್ಬರ ಹಿಂದೆ ಒಬ್ಬರಂತೆ ಇತ್ತೀಚೆಗಿ ನಿಂದ ಅಪರಿಚಿತರು ಕೊನೆಗೊಳಿಸುತ್ತಾ ಬಂದಿದ್ದಾರೆ. ಇದು ಪಾಕ್ ಮತ್ತು ಖಾಲಿಸ್ತಾನಿ ಭಯೋತ್ಪಾದಕರಲ್ಲಿ ತೀವ್ರ ಭಯ ಆವರಿಸುವಂತೆ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಇನ್ನಿಬ್ಬರು ಖಾಲಿಸ್ತಾನಿ ಮತ್ತು ಪಾಕ್ ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

೧೯೮೫ರಲ್ಲಿ ಏರ್ ಇಂಡಿಯಾ ಜೆಟ್ ಕನಿಷ್ಕಾದ ಮೇಲೆ  ಬಾಂಬ್ ದಾಳಿ ನಡೆಸಿದ ಪ್ರಕರಣದ ಆರೋಪಿ ಖಾಲಿಸ್ತಾನಿ ಭಯೋತ್ಪಾದಕ ಲಖ್ಭೀರ್ ಸಿಂಗ್ ರೋಡ್ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಎಂ) ಬೆಂಬಲಿಗ ಹಾಗೂ ಇಸ್ಲಾಮಿಕ್ ಬೋ ಧಕ ಮೌಲಾನಾ ಶೇರ್ ಬಹದ್ದೂರ್ ಎಂಬಿವರು ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ. 

  ಲಖ್ಭೀರ್ ಸಿಂಗ್ ರೋಡ್ ಸಾವಿನ ಕುರಿತು ಆತನ ಸಹೋದರ ಮಾಜಿ ಅಕಾಲ್ ತಖ್ತ್ ಜಿತೇದಾರ್ ಜಸ್ಬೀರ್ ಸಿಂಗ್ ರೋಡ್ ಕೊನೆಗೂ ದೃಢಪಡಿಸಿದ್ದಾರೆ. ಲಖ್ಭೀರ್ ಸಿಂಗ್ ರೋಡ್ ಡಿಸೆಂಬರ್ ೨ರಂದೇ ಸಾವನ್ನ ಪ್ಪಿದ್ದನು. ಆದರೆ ಅದನ್ನು ನಿನ್ನೆ ತನಕ ಯಾರೂ ಬಹಿರಂಗಪಡಿಸಿರಲಿಲ್ಲ. ಆತನ ಸಾವಿಗೆ ಹೃದಯಾಘಾತವೇ ಕಾರಣ ಎಂಬ ಪ್ರಚಾರವನ್ನು ಖಾಲಿಸ್ತಾನಿ ಉಗ್ರರು ಈಗ ನಡೆಸುತ್ತಿದ್ದಾರೆ.  ಮಾತ್ರವಲ್ಲ ಸಿಖ್ ಸಂಪ್ರದಾಯಗಳನ್ನು ಅನುಸರಿಸಿ ಆತನ ಅಂತಿಮ ವಿಧಿಗಳನ್ನು ಪಾಕಿಸ್ತಾನದಲ್ಲಿ ಅತ್ಯಂತ ರಹಸ್ಯವಾಗಿ ನಡೆಸಲಾಗಿದೆಯೆಂದು ಮೂಲಗಳು ತಿಳಿಸಿವೆ. ಖಾಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಸಹೋದರನೂ ಆಗಿದ್ದಾನೆ.ಪಾಕಿಸ್ತಾನದ ಗುಪ್ತಚರ  ಸಂಸ್ಥೆಯಾದ ಐಎಸ್‌ಐ ಆದೇಶದ ಮೇರೆಗೆ ಈ ಉಗ್ರ ಲಖ್ಭೀರ್ ಸಿಂಗ್ ರೋಡ್  ಪಂಜಾಬ್ ನಲ್ಲಿ ಭಾರತದ ವಿರುದ್ಧ ಭಯೋತ್ಪಾದ ಚಟುವಟಿಕೆಯಲ್ಲಿ ಸದಾ  ಭಾಗಿಯಾಗಿ ದ್ದನು. ಇದರ ಹೊರತಾಗಿ ಉಗ್ರ ಮೌಲಾನಾ ಶೇಕ್ ಬಹದ್ದೂರ್‌ನನ್ನು ಪಾಕಿಸ್ತಾನದ  ಪೇಶಾವರದ ಖೈಬರ್  ಪಬ್ತುರಿ ಖ್ವಾದದಲ್ಲಿ ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ಇದನ್ನು ಪಾಕಿಸ್ತಾನ ಸರಕಾರವಾಗಲೀ, ಅಲ್ಲಿನ ಪೊಲೀಸರಾಗಲೀ ಈತನಕ ಬಹಿರಂಗ ಪಡಿಸಿಲ್ಲ.  ಈಇಬ್ಬರು ಉಗ್ರರ ಹೆಸರು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ಯ ಮೋಸ್ಟ್ ವಾಂಟೆಡ್ ಉಗ್ರರ ಯಾದಿಯಲ್ಲೂ   ಒಳಗೊಂ ಡಿದೆ. ಉಗ್ರರು ಒಬ್ಬರ ಹಿಂದೆ ಒಬ್ಬರಂತೆ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿರುವುದು

Leave a Reply

Your email address will not be published. Required fields are marked *

You cannot copy content of this page