ಪಾಡಿ ಬೆಳ್ಳೂರು ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 26ರಂದು

ಎಡನೀರು: ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಈ ತಿಂಗಳ 26ರಂದು ನಡೆಯಲಿದೆ.

ಅಂದು ಬೆಳಿಗ್ಗೆ ೮ಕ್ಕೆ ಉಷಃ ಪೂಜೆ, ೯ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 10.45ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಹರಿಹರ ಸೇವಾ ಸಮಿತಿ ಅಧ್ಯಕ್ಷ ಎಂ.ಜೆ. ಹರಿಪ್ರಸಾದ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಇರವಯಿಲ್ ಕೇಶವ ತಂತ್ರಿ, ಉದ್ಯಮಿ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ, ಡಿ. ಜಯಪ್ರಕಾಶ್ ಭಟ್ ಮಂಗಳೂರು, ಶ್ರೀಧರ ಕೆ. ಶೆಟ್ಟಿ ಗುಬ್ಯ ಮೇಗಿನಗುತ್ತು ಮೊದಲಾದವರು ಉಪಸ್ಥಿತರಿರುವರು. 11.45ಕ್ಕೆ ಕೃಷ್ಣಾರ್ಪಣಂ, ಮಧ್ಯಾಹ್ನ 12.45ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 7.30ಕ್ಕೆ ಕಾರ್ತಿಕಪೂಜೆ ನಡೆಯಲಿದೆ.

You cannot copy contents of this page