ಪಾಣಕ್ಕಾಡ್ ಸಾದಿಖಲಿ ತಂಙಳ್ ವಿರುದ್ಧ ಸಮಸ್ತ ಸೆಕ್ರೆಟರಿ ಉಮ್ಮರ್ ಫೈಸಿ ಟೀಕೆ

ಮಲಪ್ಪುರಂ: ಪಾಣಕ್ಕಾಡ್ ಸಾದಿಖಲಿ ತಂಙಳ್ ವಿರುದ್ಧ ಸಮಸ್ತ ಕಾರ್ಯದರ್ಶಿ ಉಮ್ಮರ್ ಫೈಸಿ ಮುಕ್ಕಂ ಟೀಕೆ ವ್ಯಕ್ತಪಡಿಸಿದ್ದಾರೆ. ತಾನು ಖಾಝಿ ಆಗಬೇಕೆಂದು ಕೆಲವರು, ರಾಜಕೀಯದ ಹೆಸರಲ್ಲಿ ಖಾಝಿಯಾಗಿ ಮಾಡಲು ಕೆಲವರು ಯತ್ನಿಸುತ್ತಿರುವುದಾಗಿ ಮುಕ್ಕಂ ಫೈಸಿ ಪ್ರಧಾನ ಆರೋಪ ಹೊರಿಸಿದ್ದಾರೆ. ಖಾಝಿಯಾಗಿ ಮಾಡಲು ಇಸ್ಲಾಮಿಕ ಕಾನೂನುಗಳು ಇದೆ. ಆದರೆ ಅದನ್ನು ಪಾಲಿಸದೆ ಹಲವರನ್ನು ಖಾಝಿಯನ್ನಾಗಿ ಮಾಡಲಾಗುತ್ತಿದೆ. ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕೆಲವನ್ನು ಬಹಿರಂಗಗೊಳಿಸಬೇಕಾಗಿ ಬರಬಹುದೆಂದು ಉಮ್ಮರ್ ಫೈಸಿ ಘೋಷಿಸಿದ್ದಾರೆ. ಯಾರಿಗೂ ಹೆದರಿ ಅಲ್ಲ, ಜನರ ಮಧ್ಯೆ ಕಲಹ ಸೃಷ್ಟಿಸುವುದು ಬೇಡ ಎಂದೆಣಿಸಿ ಮಾತನಾಡದೆ ಕುಳಿತಿರುವುದಾಗಿ ಅವರು ನುಡಿದಿದ್ದು, ಆದರೆ ಕೆಲವರು ವ್ಯಾಪ್ತಿ ಮೀರಿ ಸಂಚರಿಸುತ್ತಿರುವುದಾಗಿ  ಹೇಳಿದ್ದಾರೆ.

ಖಾಝಿ  ಪೌಂಡೇಶನ್ ಎಂದು ಇದಕ್ಕಿಂತ ಮುಂಚೆ ಯಾರಾದರೂ ಕೇಳಿದ್ದೀರಾ? ಸಹಕಾರದೊಂದಿಗೆ ಮುಂದುವರಿಯುವುದು ರಾಜಕೀಯ ಪಕ್ಷಗಳಿಗೆ ಉತ್ತಮ ಎಂದು ಅವರು ಮಲಪ್ಪುರಂ ಎಡವಣ್ಣಪ್ಪಾರದಲ್ಲಿ ನಡೆದ ಸಮಸ್ತ ವಲಯ ಸಮಿತಿಯ ಗ್ರ್ಯಾಂಡ್ ಮೌಲೀದ್ ಕಾನ್ಫರೆನ್ಸ್‌ನಲ್ಲಿ ನುಡಿದರು.

Leave a Reply

Your email address will not be published. Required fields are marked *

You cannot copy content of this page