ಪಾರೆಸ್ಥಾನ ಶ್ರೀ ಭಗವತಿ ಕ್ಷೇತ್ರ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

ಕುಂಬಳೆ: ಆರಿಕ್ಕಾಡಿ ಪಾರೆ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕ್ಷೇತ್ರದಲ್ಲಿ ಜರಗಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕುಮಾರ ಎಂ. ಕುಂಬಳೆ ಅಧ್ಯಕ್ಷತೆ ವಹಿಸಿದ್ದು, ಬ್ರಹ್ಮಶ್ರೀ ಅರವತ್ ಕೆ.ಯು. ಪದ್ಮನಾಭ ತಂತ್ರಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಬ್ರಹ್ಮಶ್ರೀ ಕಲ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ, ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ತಂತ್ರಿ ಕಾವುಮಠ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಅಡ್ಕ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ಕೃಷ್ಣ, ಪಾಡಾಂಗರೆ ಭಗವತೀ ಕ್ಷೇತ್ರದ ನಾರಾಯಣ ಭಗವತೀ ಪೂಜಾರಿ ಮಾತನಾಡಿದರು. ಮಲಬಾರ್ ದೇವಸ್ವಂ ಬೋರ್ಡ್‌ನ ಅಧ್ಯಕ್ಷ ಎಂ.ಆರ್. ಮುರಳಿಗೆ ಜೀರ್ಣೋದ್ಧಾರ ನಿಧಿಯನ್ನು ಅಶೋಕ್ ಕುಮಾರ್ ಕುನ್ನಿಲ್ ಇವರು ಹಸ್ತಾಂತರಿಸಿದರು.

ಕುಂಬಳೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಹ್ಮಾನ್ ಆರಿಕ್ಕಾಡಿ ಮಾತನಾಡಿ, ಎಂ.ಪಿ. ಫಂಡ್, ಶಾಸಕರ ನಿಧಿಯಿಂದ ಲಭಿಸಬಹುದಾದ ಸೌಲಭ್ಯಗಳನ್ನು ಕ್ಷೇತ್ರಕ್ಕೂ, ಜನಸಾಮಾನ್ಯರಿಗೂ ಲಭಿಸುವಂತೆ ಮಾಡುವ ಭರವಸೆ ನೀಡಿದರು. ಕ್ಷೇತ್ರ ಪ್ರಧಾನ ಬೆಳ್ಚಪ್ಪಾಡ ನಾಗೇಶ ಮಾತನಾಡಿ ಕ್ಷೇತ್ರ ಕಾರ್ಯಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಸತ್ಯನಾರಾಯಣ, ಉಮೇಶ, ರಘುನಾಥ ಪೈ, ನಾರಾಯಣ ಚೂರಿತ್ತೋಡು, ಶಂಕರ್ ರೈ ಮಾಸ್ತರ್, ಮಧು ಸೂದನ, ರಾಜು ಸ್ಟೀಫನ್, ಕೃಷ್ಣ ಕೊಟ್ಟಾರ್ ಮಜಲ್, ಮಂಜುನಾಥ ಆಳ್ವ, ಕುಂಞಿರಾಮನ್ ಭಾಗವಹಿಸಿ ದರು. ಇದೇ ವೇಳೆ ೧೮ ಕ್ಷೇತ್ರದ ಆಚಾರಪಟ್ಟವರು, ಕುಂಬಳೆ ನಾಲ್ಕು ಊರ್ಯ ನೂರು ವಿಲ್ಲ ತೀಯ ಸಮು ದಾಯದ ಬಾಂಧವರು ಉಪಸ್ಥಿತರಿದ್ದರು.

You cannot copy contents of this page