ಪಾಲಕುನ್ನು ಭರಣಿ ಮಹೋತ್ಸವ: ಸುಡುಮದ್ದು ಸ್ಫೋಟ; ಕೇಸು ದಾಖಲು
ಕಾಸರಗೋಡು: ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಅಂಗವಾಗಿ ಸುಡುಮದ್ದು ಪ್ರದರ್ಶನ ನಡೆಸಿದ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕ್ಷೇತ್ರ ಆಡಳಿತ ಸಮಿತಿ ಪ್ರಧಾನ ಕಾರ್ಯ ದರ್ಶಿ ರಾಜೇಂದ್ರನಾಥ್, ಅಧ್ಯಕ್ಷ ನ್ಯಾಯವಾದಿ ಕೆ. ಬಾಲಕೃಷ್ಣನ್, ಸುಡುಮದ್ದು ಸ್ಫೋಟ ನಡೆಸಿದ ನೀಲೇಶ್ವರ ಚೆರಪ್ಪುರಂ ಪಾಲಕ್ಕಾಟ್ ಹೌಸ್‌ನ ಪಿ.ವಿ. ದಾಮೋದರನ್ (73) ಹಾಗೂ ಕಂಡರೆ ಪತ್ತೆಹಚ್ಚ ಬಹುದಾದ ಇತರ ಐದು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರ ದೂರಿನಂತೆ ಕೇಸು ದಾಖಲಿಸಲಾಗಿದೆ. ಉತ್ಸವ ವೀಕ್ಷಣೆಗೆ ತಲುಪಿದ ಸಾರ್ವಜನಿಕರಿಗೆ ಅಪಘಾತ ಉಂಟಾಗುವ ರೀತಿಯಲ್ಲಿ ಸ್ಫೋಟಕವಸ್ತು ಸಿಡಿಸಿರುವುದಾಗಿ ಕೇಸು ದಾಖಲಿಸಲಾಗಿದೆ.