ಪಾಲಕ್ಕಾಡ್ ಅಭ್ಯರ್ಥಿ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ
ಪಾಲಕ್ಕಾಡ್: ಪಾಲಕ್ಕಾಡ್ ವಿಧಾನ ಸಭೆಗೆ ನವಂಬರ್ 13ರಂದು ಉಪಚುನಾವಣೆ ನಡೆಯಲಿರುವಂ ತೆಯೇ ಈ ಕ್ಷೇತ್ರದಲ್ಲಿ ಯೂತ್ ಕಾಂ ಗ್ರೆಸ್ ನಾಯಕ ರಾಹುಲ್ ಮಾಕೂಟ ತ್ತಿಲ್‌ರನ್ನು ಯುಡಿಎಫ್ ಉಮೇ ದ್ವಾರರನ್ನಾಗಿ ಕಾಂಗ್ರೆಸ್ ಘೋಷಿಸಿರುವ ಬೆನ್ನಲ್ಲೇ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ.
ರಾಹುಲ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ರಮಕ್ಕೆ ಯೂತ್ ಕಾಂಗ್ರೆಸ್‌ನ ಇನ್ನೋರ್ವ ನಾಯಕ ಬಿ. ಸರಿನ್ ಸಿಡಿದೆದ್ದು ರಂಗಕ್ಕಿಳಿದಿದ್ದಾರೆ. ಅಭ್ಯರ್ಥಿ ಸ್ಥಾನಕ್ಕೆ ರಾಹುಲ್ ಮತ್ತು ಪಿ. ಸರಿನ್‌ರ ಹೆಸರನ್ನು ಸಮಾನವಾಗಿ ಪರಿಗಣಿಸಲಾಗಿತ್ತು. ಸರಿನ್ ಕಾಂಗ್ರೆಸ್‌ನ ಡಿಜಿಟಲ್ ಮೀಡಿಯಾ ಸೆಲ್‌ನ ಸಂಚಾಲಕರೂ ಆಗಿದ್ದಾರೆ. ಅವರನ್ನು ಅಭ್ಯರ್ಥಿಯನ್ನಾಗಿಸುವ ಒಲವನ್ನು ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಕೆ. ಸುಧಾಕರನ್ ಕೂಡಾ ವ್ಯಕ್ತಪಡಿಸಿದ್ದರು. ಆದರೆ ರಾಹುಲ್‌ರನ್ನು ನಂತರ ಶಾಫಿ ಪರಂಬಿಲ್ ಮತ್ತು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಬೆಂಬಲಿಸಿ ಕೊನೆಗೆ ಅವರನ್ನೇ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದೆ. ಪಿ. ಸರಿನ್ ಪಾಲಕ್ಕಾಡ್ ನಿವಾಸಿಯಾಗಿದ್ದಾರೆ. ಆದರೆ ರಾಹುಲ್ ಬೇರೆ ಜಿಲ್ಲೆಯವರಾ ಗಿದ್ದು, ಅದರಿಂದಾಗಿ ಸರಿನ್‌ರನ್ನು ಕೈಬಿಟ್ಟು ರಾಹುಲ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದನ್ನು ಪಾಲಕ್ಕಾಡ್ ಜಿಲ್ಲೆಯ ಹಲವು ಕಾಂಗ್ರೆಸ್ ನೇತಾರರೂ ತೀವ್ರ ವಿರೋಧ ವ್ಯಕ್ತಪಡಿಸಿ ಈಗ ರಂಗಕ್ಕಿಳಿದಿದ್ದಾರೆ.
ಕಾಂಗ್ರೆಸ್‌ನಲ್ಲಿ ತಲೆದೋರಿರುವ ಭಿನ್ನಮತದ ಬೆನ್ನಲ್ಲೇ ಆ ಪಕ್ಷದ ವಿರುದ್ಧ ಸೆಟೆದು ನಿಂತಿರುವ ಸರಿನ್‌ರಿಗೆ ಪಾಲ ಕ್ಕಾಡ್ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ವಾಗ್ದಾನವನ್ನು ಸಿಪಿಎಂ ನೀಡಿದೆ. ಎಡರಂಗದ ಪಕ್ಷೇತರ ಅಭ್ಯರ್ಥಿಯ ನ್ನಾಗಿ ಸರಿನ್‌ರನ್ನು ಸ್ಪರ್ಧೆಗಿಳಿಸುವ ಯತ್ನದಲ್ಲಿ ಸಿಪಿಎಂ ತೊಡಗಿದೆ.
2021ರ ವಿಧಾನಸಭಾ ಚುನಾವಣೆ ಯಲ್ಲಿ ಪಾಲಕ್ಕಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಾಫಿ ಪರಂಬಿಲ್ ಗೆದ್ದಿದ್ದರು. ಅವರು 54,0799 ಮತಗಳನ್ನು ಗಳಿಸಿ 3859 ಮತಗಳ ಅಂತರದಿಂದ ಗೆದ್ದಿ ದ್ದರು. ನಂತರ ಅವರು ಕಳೆದ ಲೋಕ ಸಭಾ ಚುನಾವಣೆಯಲ್ಲಿ ವಡಗರೆ ಕ್ಷೇತ್ರ ದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅದರಿಂದಾಗಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಿದ್ದರು. ಇದರಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗು ತ್ತಿದೆ. 2021ರಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಸಿಪಿಎಂ 50220 ಮತ್ತು ಬಿಜೆಪಿ 36624 ಮತ ಗಳಿಸಿತ್ತು. ಕಾಂಗ್ರೆಸ್‌ನಲ್ಲಿ ಈಗ ತಲೆಯೆತ್ತಿರುವ ಭಿನ್ನ ಮತದ ಲಾಭವನ್ನು ಗಿಟ್ಟಿಸಿಕೊಳ್ಳಲು ಇನ್ನೊಂದೆಡೆ ಬಿಜೆಪಿ ಮತ್ತು ಸಿಪಿಎಂ ತೊಡಗಿದೆ.