ಪಿಕಪ್ ವ್ಯಾನ್ ಕ್ರೇನ್‌ಗೆ ಢಿಕ್ಕಿ: ಯುವಕನಿಗೆ ಗಾಯ ಗಂಟೆಗಳ ಕಾಲ ವಾಹನದಲ್ಲಿ ಸಿಲುಕಿದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕದಳ

ಕುಂಬಳೆ: ಪಿಕಪ್ ವ್ಯಾನ್ ಕ್ರೇನ್‌ಗೆ ಢಿಕ್ಕಿ ಹೊಡೆದು ಸಂಭ ವಿಸಿದ ಅಪಘಾತದಲ್ಲಿ ಯುವಕ ನೋರ್ವ ಗಾಯಗೊಂಡಿದ್ದಾನೆ.

ನಿನ್ನೆ ಮಧ್ಯಾಹ್ನ ಪೆರುವಾಡ್‌ನಲ್ಲಿ ಅಪಘಾತವುಂಟಾಗಿದೆ. ಇದರಿಂದ ಗಾಯಗೊಂಡ ನಿಯಾಸ್ ಎಂಬ ಯುವಕನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಹಾನಿಗೊಂಡ ಪಿಕಪ್ ವ್ಯಾನ್‌ನಲ್ಲೇ ಯುವಕ ಗಂಟೆಗಳ ಕಾಲ ಸಿಲುಕಿದ್ದನು. ಕೊನೆಗೆ ಅಗ್ನಿಶಾಮಕದಳ ತಲುಪಿ  ಹೈಡ್ರೋಲಿಕ್ ಕಟ್ಟರ್ ಬಳಸಿ ಪಿಕಪ್ ವಾಹನದ ಬಾಡಿಯನ್ನು ತುಂಡರಿಸಿ ಯುವಕನನ್ನು ಹೊರತೆಗೆಯಲಾಯಿತು.

ಯುವಕನ ಎರಡೂ ಕಾಲುಗಳಿಗೆ ಗಾಯಗಳಾಗಿವೆಯೆಂದು ತಿಳಿದುಬಂ ದಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸಣ್ಣಿ ಇಮಾನುವಲ್‌ರ ನೇತೃತ್ವದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಗಳಾದ ಪಿ.ಜಿ. ಜೀವನ್.ಎಸ್. ಅರುಣ್ ಕುಮಾರ್,ಟಿ. ಅಮಲ್‌ರಾಜ್, ಜಿತ್ತು  ಥೋಮಸ್, ಸಿ.ವಿ. ಶಬಿಲ್ ಕುಮಾರ್ ಎಂಬಿವರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

You cannot copy contents of this page