ಪಿಟ್ ಎನ್‌ಡಿಪಿಎಸ್ ಆಕ್ಟ್: ಮಂಜೇಶ್ವರ ನಿವಾಸಿ ಬಂಧನ, 1 ವರ್ಷ ಜೈಲಿಗೆ

ಮಂಜೇಶ್ವರ: 1ಕ್ಕಿಂತ ಹೆಚ್ಚು ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಆರೋಪಿಗಳಾಗುವವರನ್ನು ಸೆರೆ ಹಿಡಿದು ಜೈಲಿಗಟ್ಟಲು ಕೇರಳ ಪೊಲೀಸ್ ಇಲಾಖೆ ಜ್ಯಾರಿಗೊಳಿಸಿರುವ ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಮಂಜೇಶ್ವರ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಬಂಧಿಸಲ್ಪಡುವ ಮೊದಲ ವ್ಯಕ್ತಿಯಾಗಿದ್ದಾನೆ ಈತ.

ಮಂಜೇಶ್ವರ ಬಡಾಜೆ ನಿವಾಸಿ ಸೂರಜ್ ರೈ (27) ಬಂಧಿತ ಆರೋಪಿ. ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್, ಎಸ್‌ಐ ಕೆ. ನಾರಾಯಣನ್ ನಾಯರ್‌ರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ. ರಾಜ್ಯ ಸರಕಾರದ ಆದೇಶದಂತೆ ಈತನನ್ನು ಒಂದು ವರ್ಷದ ತನಕ ಜೈಲಿನಲ್ಲಿ ಕೂಡಿಹಾಕಲೆಂದು, ನಂತರ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ ರೆಡ್ಡಿಯ ನಿರ್ದೇಶದಂತೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಮಂಜೇಶ್ವರದಲ್ಲಿ ೨ ಹಾಗೂ ಉಳ್ಳಾಲದಲ್ಲಿ ಈತನ ವಿರುದ್ಧ ಬೇರೊಂದು ಮಾದಕದ್ರವ್ಯ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರವಾಗಿ ಮಾದಕದ್ರವ್ಯ ಪ್ರಕರ ಣಗಳಲ್ಲಿ ಆರೋಪಿಗಳಾಗಿರುವವರನ್ನು ಗುರುತಿಸಿ ಪ್ರಿವೆನ್ಶನ್ ಆಫ್ ಇಲ್ಲಿಸಿಟ್ ಟ್ರಾಫಿಕ್ ಎನ್‌ಡಿಪಿಎಸ್ (ಪಿಟ್ ಎನ್‌ಡಿಪಿಎಸ್) ಆಕ್ಟ್ ಪ್ರಕಾರ ಬಂಧಿಸಿ ಜೈಲಿಗಟ್ಟಲಾಗುತ್ತಿದೆ. ಅದರಂತೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page