ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಾಳೆಯಿಂದ
ಕಾಸರಗೋಡು: ಪಿಲಿಕುಂಜೆ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಾಳೆಯಿಂದ ೨೮ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನಾಳೆ ಬೆಳಿಗ್ಗೆ ೮ಕ್ಕೆ ಗಣಪತಿ ಹೋಮ, ತಂಬಿಲ, ಸಂಜೆ ಆನೆಚಪ್ಪರ ಏರಿಸುವುದು, ಭಂಡಾರ ಮೆರವಣಿಗೆ, ಕಲಶ, ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ೮.೩೦ಕ್ಕೆ ಮರುಹುತ್ತರಿ ಮಹೋತ್ಸವ ನಡೆಯಲಿದೆ. ೨೪ರಂದು ಸಂಜೆ ೫ ಗಂಟೆಗೆ ವಿವಿಧ ದೈವಗಳ ವೆಳ್ಳಾಟ, ರಾತ್ರಿ ೯ಕ್ಕೆ ಬಿಂಬ ದರ್ಶನ, ಬಳಿಕ ವಿವಿಧ ದೈವನೇಮ, ೨೫ರಂದು ಬೆಳಿಗ್ಗೆ ೬ಕ್ಕೆ ಕಾಲಪುಳಿಯನ್ ದೈವ, ಬಳಿಕ ವಿವಿಧ ದೈವ ನರ್ತನ, ಮಧ್ಯಾಹ್ನ ನಡು ಕಳಿಯಾಟ ಆರಂಭ, ಸಂಜೆ ೫ರಿಂದ ಪುಲ್ಲೂರ್ಣನ್ ದೈವ ಸಹಿತ ವಿವಿಧ ದೈವ, ರಾತ್ರಿ ೮ಕ್ಕೆ ಮಡಪ್ಪುರ ಶ್ರೀ ಮುತ್ತಪ್ಪನ್ ಹುಲ್ಪೆ ಸಮರ್ಪಣೆ ಸಮಿತಿಯಿಂದ ಹುಲ್ಪೆ ಸಮರ್ಪಣೆ, ಪುಷ್ಪಾರ್ಚನೆ, ಬಳಿಕ ವಿವಿಧ ದೈವ ನೇಮ ನಡೆಯಲಿದೆ.
೨೬ರಂದು ಬೆಳಿಗ್ಗೆ ೬ಕ್ಕೆ ಆಲಿದೈವ, ೭ರಿಂದ ಕಾಳಪುಲಿಯನ್ ದೈವ, ೧೧ ಗಂಟೆಗೆ ಮಂತ್ರಮೂರ್ತಿ ದೈವ, ಬಳಿಕ ವಿವಿಧ ದೈವ, ರಾತ್ರಿ ೮ಕ್ಕೆ ಕಾಸರಗೋಡು ಯುವಜನ ಸಂಘದ ಆಶ್ರಯದಲ್ಲಿ ಗಾನಮೇಳ ನಡೆಯಲಿದೆ. ೨೭, ೨೮ರಂದು ವಿವಿಧ ದೈವನೇಮ ನಡೆಯಲಿದೆ. ೨೮ರಂದು ರಾತ್ರಿ ೯ ಗಂಟೆಗೆ ಹೆಣ್ಮಕ್ಕಳ ಚಪ್ಪರ ಮುಹೂರ್ತ ನಡೆಯಲಿದೆ.