ಪಿ.ವಿ. ಅನ್ವರ್‌ರಿಂದ ಹೊಸ ರಾಜಕೀಯ ಪಕ್ಷ
ತಿರುವನಂತಪುರ: ಭಾರೀ ವಿವಾದ ಗಳಲ್ಲಿ ಸಿಲುಕಿಕೊಂಡಿರುವ ಸಿಪಿಎಂ ಪಕ್ಷೇತರ ಶಾಸಕ ಪಿ.ವಿ. ಅನ್ವರ್ ತನ್ನ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷ ರೂಪೀಕರಿಸಲು ತೀರ್ಮಾನಿಸಿದ್ದಾರೆ. ಇಂದು ಬೆಳಿಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ನನ್ನ ನೇತೃತ್ವದ ಹೊಸ ರಾಜ ಕೀಯ ಪಕ್ಷ ಯುವಕರನ್ನೊಳಗೊಂಡ ಒಂದು ಹೊಸ ಟೀಂ ಆಗಲಿದೆ. ಇದು ಜಾತ್ಯಾತೀತ ಪಕ್ಷವಾಗಲಿದ್ದು, ದಲಿತರು ಮತ್ತು ಹಿಂದುಳಿದ ವಿಭಾಗಗಳನ್ನು ಇದ ರಲ್ಲಿ ಒಳಪಡಿಸಲಾಗುವುದು. ಮುಂದಿನ ವರ್ಷ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಪಂಚಾಯತ್‌ಗಳಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದೆಯೆಂದು ಅನ್ವರ್ ಹೇಳಿದ್ದಾರೆ.
ಹಿಂದೂ ಓರ್ವ ಸಿಪಿಎಂ ಬಿಟ್ಟಲ್ಲಿ ಆತನಿಗೆ ‘ಸಂಘಿ’ ಎಂಬ ಪಟ್ಟ ಸಿಪಿಎಂ ನೀಡುತ್ತಿದೆ. ಇನ್ನು ಮುಸ್ಲಿಂ ಸದಸ್ಯ ಪಕ್ಷ ತ್ಯಜಿಸಿದಲ್ಲಿ ಆತನನ್ನು ‘ಜಮಾಯತ್ ಇಸ್ಲಾಮಿ’ ಎಂದು ಅವರು ಕರೆಯುತ್ತಾರೆ. ಕ್ರೈಸ್ತರು ಪಕ್ಷ ತ್ಯಜಿಸಿದಲ್ಲಿ ‘ಕ್ರಿಸಂಘಿ’ ಎಂಬ ಪಟ್ಟ ಸಿಪಿಎಂ ನೀಡುತ್ತಿದೆ. ಹೀಗೆ ಪಕ್ಷದಿಂದ ಹೊರಬರುವ ಎಲ್ಲರಿಗೂ ಸಿಪಿಎಂ ಒಂದೊಂದು ರೀತಿಯ ಪಟ್ಟ ನೀಡುತ್ತಿದೆ. ನಾನು ಈಗ ಎಡರಂಗ ದಲ್ಲಿದ್ದೇನೆ. ಆ ಒಕ್ಕೂಟದಿಂದ ಹೊರ ಬಂದ ಬಳಿಕ ವಷ್ಟೇ ಹೊಸ ಪಕ್ಷಕ್ಕೆ ರೂಪು ನೀಡುವೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಮುಂದೆ ನಿರ್ಧರಿಸಲಾಗು ವುದೆಂದು ಅವರು ಹೇಳಿದ್ದಾರೆ.