ಪಿ.ವಿ. ಅನ್ವರ್ ವಿರುದ್ಧ ವಿಜಿಲೆನ್ಸ್ ತನಿಖೆ
ತಿರುವನಂತಪುರ: ತೃಣಮೂಲ ಕಾಂಗ್ರೆಸ್ ರಾಜ್ಯ ಕೋ-ಆರ್ಡಿ ನೇಟರ್ ಪಿ.ವಿ. ಅನ್ವರ್ ವಿರುದ್ಧ ವಿಜಿಲೆನ್ಸ್ ತನಿಖೆ ನಡೆಯಲಿದೆ. ಅನಧಿ ಕೃತವಾಗಿ ಭೂಮಿ ಕೈವಶವಿರಿಸಿಕೊಂಡ ಆರೋಪದಂತೆ ತನಿಖೆಗೆ ನಿರ್ದೇಶಿಸ ಲಾಗಿದೆ. ಆಲುವ ಈಸ್ಟ್ ವಿಲ್ಲೇಜ್ ನಲ್ಲಿ 11.46 ಎಕ್ರೆ ಭೂಮಿಯಲ್ಲಿ ಅನಧಿಕೃತವಾಗಿ ಕೈವಶವಿರಿಸಿರು ವುದಾಗಿ ಲಭಿಸಿದ ದೂರಿನಲ್ಲಿ ನಡೆಸಿದ ಪ್ರಾಥಮಿಕ ತನಿಖೆಯ ವರದಿಯಲ್ಲಿ ಸಮಗ್ರ ತನಿಖೆ ನಡೆಸು ವಂತೆ ಗೃಹ ಖಾತೆ ನಿರ್ದೇಶಿಸಿದೆ.