ಪುಣ್ಯ ಕ್ಷೇತ್ರಗಳ ಪುನರುದ್ಧಾರಕ್ಕೆ ಹಿಂದೂಗಳು ಸಂಕಲ್ಪ ತೊಡಬೇಕು-ಸುಬ್ರಹ್ಮಣ್ಯನ್ ಸ್ವಾಮಿ

ಮಂಜೇಶ್ವರ: ಅಯೋಧ್ಯೆ, ಮಥುರಾ, ಕಾಶೀ ಹಿಂದುಗಳ ಪರಮಪವಿತ್ರ ದೇವಾಲಯಗಳಾಗಿವೆ. ಅಯೋಧ್ಯೆಯ ಬಳಿಕ ಉಳಿದೆರಡು ಕ್ಷೇತ್ರಗಳ ಅಭಿವೃದ್ಧಿಗೂ ಹಿಂದೂಗಳು ಸಮರ್ಥ ಸೇವೆ ಸಲ್ಲಿಸಬೇಕು ಎಂದು  ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ, ವಿರಾಟ್ ಹಿಂದೂ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ರಹ್ಮಣ್ಯನ್ ಸ್ವಾಮಿ ನುಡಿದಿದ್ದಾರೆ. ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿ ತಿಯ ನೇತೃತ್ವದಲ್ಲಿ ಜಿಲ್ಲಾ  ಕಾರ್ಯಾ ಲಯ ಹೊಸಂಗಡಿ ಪ್ರೇರಣಾದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಅಶ್ವತ್ಥೋಪನ ಯನ, ವಿವಾಹೋತ್ಸವ, ಸಾಮೂಹಿಕ ಶ್ರೀ ಅಶ್ವತ್ಥನಾರಾಯಣ ಪೂಜೆಯ ಅಂಗವಾಗಿ ಮೊನ್ನೆ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅವರು ಮುಂ ದುವರಿದು ಮಾತನಾಡಿ ಹಿಂದುಗಳಿಂದ ಕೈಬಿಟ್ಟುಹೋದ ಸುಮಾರು ೪೦ ಸಾವಿರ ದಷ್ಟು ಪುಣ್ಯಕ್ಷೇತ್ರಗಳ ಪುನರುದ್ಧಾರಕ್ಕೂ ಹಿಂದುಗಳು ಸಂಕಲ್ಪತೊಡಬೇಕೆಂದರು. ರಾಷ್ಟ್ರದ  ಪರಮ ವೈಭವಕ್ಕೆ ದೇಗುಲಗಳ ಅಭಿವೃದ್ಧಿಯೇ ಪೂರಕವಾಗಬೇಕೆಂದ ಅವರು ದೇವಸ್ಥಾನಗಳ ಆಡಳಿತವನ್ನು ಸರಕಾರ ವಹಿಸಿಕೊಳ್ಳುವುದಕ್ಕಿಂತ ಹಿಂದೂಗಳೇ ವಹಿಸಿಕೊಳ್ಳಬೇಕೆಂ ದರು. ದೇವಸ್ಥಾನಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಬೌದ್ಧಿಕ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿ ಕೆಗಳಿಗೂ ವೇದಿಕೆ  ಕಲ್ಪಿಸಬೇಕೆಂದರು.

ವಿ.ಹಿಂ.ಪ ತನ್ನ ಎಲ್ಲಾ ಕಾರ್ಯ ಕ್ರಮಗಳಲ್ಲೂ ಸಂಸ್ಕೃತ ಭಾಷೆಯನ್ನು ಬಳಸಬೇಕೆಂದು ಅವರು ಸಲಹೆ ನೀಡಿದರು. ಇದರಿಂದ ಪವಿತ್ರ ಗ್ರಂಥಗಳ ಅಭ್ಯಸಿಸಲು ಅನುಕೂಲವಾಗುತ್ತದೆ ಎಂದು ಸುಬ್ರಹ್ಮಣ್ಯನ್ ನುಡಿದರು. ವಿ.ಹಿಂ.ಪ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು.

You cannot copy contents of this page