ಪುತ್ತಿಗೆ ಪಂ.ನಲ್ಲಿ ಮಾನದಂಡ ಪಾಲಿಸದೆ ವಾರ್ಡ್ ವಿಭಜನೆ : ಯುಡಿಎಫ್‌ನಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ಪುತ್ತಿಗೆ: ಪುತ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಮಾನದಂಡಗಳನ್ನು ಪಾಲಿಸದೆ ಅವೈಜ್ಞಾನಿಕ ರೀತಿಯಲ್ಲಿ ವಾರ್ಡ್ ವಿಭಜನೆ ನಡೆಸಲಾಗಿದೆ ಯೆಂದು ಆರೋಪಿಸಿ ಯುಡಿಎಫ್ ಪುತ್ತಿಗೆ ಪಂಚಾಯತ್ ಸಮಿತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಡಿಲಿಮಿಟೇಶನ್ ಕಮಿಶನ್ ನಿರ್ದೇ ಶಿಸಿದ ಗಡಿಗಳು ಹಾಗೂ ಜನಸಂಖ್ಯೆ ಯನ್ನು ಅನುಸರಿಸಿ ಮಾನದಂಡಗಳನ್ನು ಪಾಲಿಸದೆ ಕೆಲವು ವ್ಯಕ್ತಿಗಳು ಹಾಗೂ ರಾಜಕೀಯ ಪಕ್ಷದ ಹಿತಾಸಕ್ತಿಯನು ಸಾರ ವಾರ್ಡ್ ವಿಭಜನೆ ಅಂತಿಮ ವಿಜ್ಞಾಪನೆಯಲ್ಲಿ ಪಕ್ಷಪಾತ ನೀತಿ ತೋರಿಸಲಾಗಿದೆಯೆಂದು ತಿಳಿಸಿ ಯುಡಿಎಫ್ ಚೆಯರ್‌ಮೆನ್ ಸುಲೈಮಾನ್ ಊಜಂಪದವು ಹಾಗೂ ಕನ್ವೀನರ್ ಇ.ಕೆ. ಮುಹಮ್ಮದ್ ಕುಂಞಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲ ಯ ಅರ್ಜಿ ಮೇಲೆ ತೀರ್ಪು ಕಲ್ಪಿಸುವುದಕ್ಕೆ ಅನುಸರಿಸಿ ವಾರ್ಡ್ ವಿಭಜನೆ ಅಂತಿಮ ವಿಜ್ಞಾಪನೆ ನಡೆಸುವಂತೆ ನಿರ್ದೇಶಿಸಿದೆ. ಪಂಚಾಯತ್ ಅಧಿಕಾರಿಗಳಿಗೂ, ಡಿಲಿಮಿಟೇಶನ್ ಕಮಿಷನ್‌ಗೂ ನೋಟೀಸು ಕಳುಹಿಸಲಾಗಿದೆ. ಈ ಹಿಂದೆ ಕರಡು ವಿಜ್ಞಾಪನೆಯಲ್ಲಿ ಉಂಟಾದ ಲೋಪದೋಷಗಳನ್ನು ಸೂಚಿಸಿ ಪಂಚಾಯತ್‌ನ ವಿವಿಧ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ೩೮ರಷ್ಟು ದೂರುಗಳನ್ನು ಕಮಿಷನ್‌ಗೆ ಸಲ್ಲ್ಲಿಸಲಾಗಿದೆಯೆಂದು ಮಾಹಿತಿ ಹಕ್ಕು ದಾಖಲೆಗಳಲ್ಲಿ ತಿಳಿಸಲಾಗಿದೆ. ಕೆಲವು ರಾಜಕೀಯ ವ್ಯಕ್ತಿಗಳು ತಿಳಿಸಿದ ಸ್ಪಷ್ಟ ನ್ಯೂನತೆಗಳನ್ನು ಪರಿಹರಿಸದೆ ಕರಡಿನಲ್ಲಿ ತಿಳಿಸಿದ ಪ್ರಕಾರ ಅಂತಿಮ ವಿಜ್ಞಾಪನೆ ನಡೆಸಿರುವುದಾಗಿ ಯುಡಿಎಫ್ ಆರೋಪಿಸಿದೆ. ಯಾರೂ ದೂರು ನೀಡದೇನೇ ಒಂದು ಹಾಗೂ ಎರಡನೇ ವಾರ್ಡ್‌ನಲ್ಲಿ ಆಡಳಿತಕ್ಕೆ ನೇತೃತ್ವ ನೀಡುವ ಪಕ್ಷಗಳ ನೇತಾರರು ಒತ್ತಡ ಹೇರಿರುವು ದಾಗಿಯೂ ಆರೋಪಿಸಲಾಗಿದೆ. ಮಾನದಂಡಗಳನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಕ್ಕೆ ಅನುಕೂಲವಾಗಿ ವಾರ್ಡ್ ವಿಭಜನೆ ನಡೆಸಿ ವಿಜ್ಞಾಪನೆ ಹೊರಡಿಸಿರುವು ದರಿಂದ ಯುಡಿಎಫ್ ನ್ಯಾಯಾಲಯ ವನ್ನು ಸಮೀಪಿಸಿರುವುದಾಗಿ ಹೇಳಲಾಗುತ್ತಿದೆ.