ಪುತ್ತೂರು ಕ್ಷೇತ್ರದಲ್ಲಿ ಕಳೆದ ತಿಂಗಳು ದಾಖಲೆ ಹುಂಡಿ ಕಾಣಿಕೆ ಸಂಗ್ರಹ
ಪುತ್ತೂರು: ಪ್ರಸಿದ್ಧ ಕ್ಷೇತ್ರವಾದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಗಳಿಕೆ ಉಂಟಾಗಿದೆ. ಕಳೆದ ಡಿ. ೨೯ರಂದು ತಿಂಗಳ ಹುಂಡಿ ಲೆಕ್ಕಾಚಾರ ನಡೆಸಲಾಗಿದ್ದು, ಅದರಲ್ಲಿ ಡಿಸೆಂಬರ್ ತಿಂಗಳಲ್ಲಿ ೨೩ ಲಕ್ಷ ರೂ. ಸಂಗ್ರಹವಾಗಿದೆ. ಸಾಮಾನ್ಯ ವಾಗಿ ಎಪ್ರಿಲ್ ತಿಂಗಳಲ್ಲಿ ನಡೆಯುವ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಹುಂಡಿ ಕಾಣಿಕೆ ಹೆಚ್ಚಾಗಿರುತ್ತಿದ್ದು, ಆದರೆ ಕಳೆದ ತಿಂಗಳು ಅದಕ್ಕಿಂತಲೂ ಹೆಚ್ಚು ಸಂಗ್ರಹವಾಗಿದೆ.
ದೇವಸ್ಥಾನದ ಮಹಾಗಣಪತಿ ಗುಡಿ, ಶ್ರೀ ಮಹಾಲಿಂಗೇಶ್ವರ ದೇವರ ನಡೆಯ ಕಾಣಿಕೆ ಹುಂಡಿಯಲ್ಲಿ ರೂ. ೫೦೦ ಮುಖಬೆಲೆಯ ಕಂತೆಯಲ್ಲಿ ೧೨ ಲಕ್ಷ ರೂ. ಸಂಗ್ರಹವಾಗಿದೆ. ಇಲ್ಲಿ ಪ್ರತಿ ತಿಂಗಳು ೧೦, ೧೧ ಲಕ್ಷ ರೂ. ಹಣ ಸಂಗ್ರಹವಾಗುತ್ತಿದೆ. ಆದರೆ ದಶಂಬರ್ ತಿಂಗಳಲ್ಲಿ ದೇವಳ ವಠಾರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ಶ್ರೀ ಅಯ್ಯಪ್ಪ ದೀಪೋತ್ಸವ, ಲಕ್ಷ ದೀಪೋತ್ಸವ ಮೊದಲಾದ ಕಾರ್ಯಕ್ರಮಗಳು ನಡೆದಿತ್ತು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರ ಸಂದರ್ಶಿಸಿದ್ದರು. ಅಲ್ಲದೆ ಇಲ್ಲಿ ಈಗ ಧನುಪೂಜೆ ನಡೆಯುತ್ತಿದ್ದು, ಭಕ್ತರು ಆಗಮಿಸುತ್ತಿದ್ದಾರೆ.