ಪುದುಕೋಳಿ ರಸ್ತೆ ದುರವಸ್ಥೆ: ಸಂಪರ್ಕ ನೀಡದ ಪೈಪ್‌ನಲ್ಲಿ ಚಿಮ್ಮಿದ ನೀರು…!

ಬದಿಯಡ್ಕ: ನಿರಂತರ ಸುರಿಯುತ್ತಿರುವ ವರ್ಷಧಾರೆಯಿಂದ ಗ್ರಾಮೀಣ ಪ್ರದೇಶದ ಜನಜೀವನ ಅತಂತ್ರವಾಗಿದೆ. ರಸ್ತೆಗಳಲ್ಲಿ ಹರಿಯುತ್ತಿರುವ ನೀರು, ಮರಗಳ ನೆಲಕಚ್ಚುವಿಕೆ, ವಿದ್ಯುತ್ ಮೊಟಕುಗಳಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ನೀರ್ಚಾಲು-ಪುದುಕೋಳಿ-ಮಾನ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ವಾಹನ ಸಂಚಾರ ಮೊಟಕುಗೊಂಡಿದೆ. ಮಳೆ ನೀರು ಹರಿಯುತ್ತಿರುವುದರಿಂದ ವಾಹನ ನಿಲ್ಲಿಸಿ ರಸ್ತೆ ಹುಡುಕಿ ತೆರಳಬೇಕಾದ ದುರವಸ್ಥೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೊಟಕುಗೊಂಡಿದ್ದ ವಿದ್ಯುತ್ ಸಂಪರ್ಕ ಪುನಃಸ್ಥಾಪಿಸ ಲ್ಪಟ್ಟರೂ ಕಣ್ಣಾಮುಚ್ಚಾಲೆಗೆ ಕೊನೆ ಇಲ್ಲವಾಗಿದೆ. ಮಳೆಯ ಮಧ್ಯೆ ನಿನ್ನೆ ಬೆಳಿಗ್ಗೆ ಪುದುಕೋಳಿ ಕೊರುಂಗು ತೊಟ್ಟಿಯಲ್ಲಿ ಜಲಜೀವನ ಮಿಷನ್ ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಫ್ ಲೈನ್ ಜಂಕ್ಷನ್ ವೊಂದರಿAದ ಹಠಾತ್ ನೀರು ಚಿಮ್ಮತೊಡಗಿದ್ದು ಪರಿಸರ ವಾಸಿಗಳಲ್ಲಿ ಆಶ್ಚರ್ಯ ಸೃಷ್ಟಿಸಿದೆ. ಅಪೂರ್ಣ ಪೈಪ್ ಹಾಗೂ ಯೋಜನೆ ಅರ್ಧದಲ್ಲೇ ಮೊಟಕು ಗೊಂಡಿದ್ದರಿAದ ಇನ್ನೂ ನೀರು ಸಂಪರ್ಕ ಲಭಿಸದ ಪೈಪ್ ಮೂಲಕ ಎತ್ತರೆತ್ತರಕ್ಕೆ ನೀರು ಚಿಮ್ಮುತ್ತಿರುವುದು ಕಂಡು ಮೂಗಿಗೆ ಬೆರಳಿರಿಸಿದ್ದಾರೆ. ಪಕ್ಕದಲ್ಲಿ ಕೃಷಿ ತೋಟಗಳಿದ್ದು ಕೆಸರು ನೀರು ಸಹಿತ ತ್ಯಾಜ್ಯ ತೋಟದೊಳಗೆ ತುಂಬಿಕೊAಡಿದೆ.

RELATED NEWS

You cannot copy contents of this page