ಪುದುಪಳ್ಳಿ ಉಪಚುನಾವಣೆ: ಮೊದಲ ನಾಲ್ಕು ಗಂಟೆಗಳಲ್ಲಿ ೩೦ ಶೇ. ಮತದಾನ
ಕೋಟ್ಟಯಂ: ಉಪ ಚುನಾವಣೆ ನಡೆಯುತ್ತಿರುವ ಪುದುಪ್ಪಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾಧಾರಣ ರೀತಿಯಲ್ಲಿ ಮತದಾನ ನಡೆಯುತ್ತಿದೆ. ಮೊದಲ ನಾಲ್ಕು ಗಂಟೆಗಳಲ್ಲಿ ೩೦ ಶೇಕಡಾ ಮತದಾನ ನಡೆದಿದೆ. ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ ೬ ಗಂಟೆವರೆಗೆ ಮುಂದುವರಿಯಲಿದೆ. ಈ ಮಂಡಲದಲ್ಲಿರುವ ೮ ಪಂಚಾಯತ್ಗಳಲ್ಲಾಗಿ ೧೮೨ ಮತಗಟ್ಟೆಗಳಿವೆ. ಯುಡಿಎಫ್ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಚಾಂಡಿ ಉಮ್ಮನ್, ಎಲ್ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂನ ಜೈಕ್ ಥೋಮಸ್, ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಜಿ. ಲಿಜಿನ್ಲಾಲ್, ಎಎಪಿಯಿಂದ ಲೂಕ್ ಥೋಮಸ್ ಹಾಗೂ ಮೂವರು ಸ್ವತಂತ್ರರು ಸ್ಪರ್ಧಾಕಣದಲ್ಲಿದ್ದಾರೆ.