ಪುಷ್ಪನ್ ವಿರುದ್ಧ ಜಾಲತಾಣದಲ್ಲಿ ಪೋಸ್ಟ್  ಗ್ರೇಡ್ ಎಸ್‌ಐ ಅಮಾನತು

ಕೊಚ್ಚಿ: ಕೂತುಪರಂಬ್ ಹೋರಾ ಟಕ್ಕೆ ನೇತೃತ್ವ ನೀಡಿದ ಪುಷ್ಪನ್ ಎಂಬವರು ಮೃತಪಟ್ಟಾಗ ಸಾಮಾಜಿಕ ಜಾಲ ತಾಣಗಳಲ್ಲಿ ಅವರ ವಿರುದ್ಧ ಪೋಸ್ಟ್ ಹಾಕಿದ ಗ್ರೇಡ್ ಎಸ್‌ಐಯನ್ನು ಅಮಾನತುಗೊಳಿಸಲಾಗಿದೆ. ಕೋತಮಂ ಗಲಂ ಠಾಣೆಯ ಗ್ರೇಡ್ ಎಸ್‌ಐ ಹರಿಪ್ರಸಾದ್‌ನನ್ನು ಅಮಾನತುಗೊಳಿಸ ಲಾಗಿದೆ. ಎರ್ನಾಕುಳಂ ರೇಂಜ್ ಡಿಐಜಿ ಅಮಾನತು ಆದೇಶ ಹೊರಡಿಸಿದ್ದಾರೆ. ಹರಿಪ್ರಸಾದ್ ವಿರುದ್ಧ ಮೂವಾಟುಪುಳ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಮಾಜದಲ್ಲಿ ದ್ವೇಷ ಉಂಟಾಗುವ ರೀತಿಯಲ್ಲಿ ಪ್ರಚಾರ ನಡೆಸಿರುವುದಾಗಿ ಆರೋಪಿಸಿ ಕೇಸು ದಾಖಲಿಸಲಾಗಿದೆ. ನಾರ್ಕೋಟಿಕ್ ಸೆಲ್ ಪೊಲೀಸ್ ಸುಪರಿಂಟೆಂಡೆಂಟ್‌ರ ಮೇಲ್ನೋಟದಲ್ಲಿ ಘಟನೆ ಬಗ್ಗೆ ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ನೀಡಬೇಕೆಂದು ನಿರ್ದೇಶಿಸಲಾಗಿದೆ.

You cannot copy contents of this page