ಪೂವಡ್ಕ- ಅಡ್ಕತ್ತೊಟ್ಟಿ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಹಲವು ದಿನಗಳಿಂದ ಬೀಡು ಬಿಟ್ಟಿರುವುದಾಗಿ ಸ್ಥಳೀಯರು
ಮುಳ್ಳೇರಿಯ: ಇಲ್ಲಿಗೆ ಸಮೀಪದ ಪೂವಡ್ಕದಿಂದ ಅಡ್ಕತ್ತೊಟ್ಟಿಗೆ ತೆರಳುವ ರಸ್ತೆಯಲ್ಲಿ ಕಾಡುಕೋಣಗಳು ಗುಂಪಾಗಿ ವಿಹರಿಸುತ್ತಿರುವುದು ಕಂಡು ಬಂದಿದೆ. ೮ ಕಾಡುಕೋಣಗಳು ನಿನ್ನೆ ಸಂಜೆ ಇಲ್ಲಿ ರಸ್ತೆಗಿಳಿದಿವೆ. ಈ ಸಮಯದಲ್ಲಿ ಈ ದಾರಿಯಾಗಿ ತೆರಳುತ್ತಿದ್ದವರು ಇದರ ವೀಡಿಯೋ ಚಿತ್ರೀಕರಿಸಿದ್ದಾರೆ. ಜನರನ್ನು ಹಾಗೂ ವಾಹನಗಳನ್ನು ಕಂಡರೂ ರಸ್ತೆಯಿಂದ ಕದಲದೇ ಅತ್ತಿತ್ತ ನೋಡುತ್ತಾ ಕಾಡುಕೋಣಗಳು ನಿಂತಿವೆ ಎಂದಿದ್ದಾರೆ. ಬಳಿಕ ಕಾಡಿನೊಳಗೆ ತೆರಳಿವೆ ಎಂದು ಈ ದಾರಿಯಾಗಿ ಸಂಚರಿಸುತ್ತಿದ್ದವರು ತಿಳಿಸಿದ್ದು, ಕಳೆದ ಕೆಲವು ದಿನಗಳಿಂದ ಇಲ್ಲಿ ಗುಂಪಾಗಿ ಕಾಡುಕೋಣಗಳು ಕಂಡು ಬರುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚೆರ್ಕಳ- ಜಾಲ್ಸೂರು ಅಂತಾರಾಜ್ಯ ರಸ್ತೆಯ ಕೇವಲ ೫೦ ಮೀಟರ್ ಒಳಗೆ ಕಾಡುಕೋಣಗಳ ಹಿಂಡು ಪತ್ತೆಯಾಗಿದೆ.