ಪೆನ್ಶನರ್ಸ್ ಸಂಘದಿಂದ ಮಂಜೇಶ್ವರ ಸಬ್ ಟ್ರಷರಿ ಧರಣಿ

ಮಂಜೇಶ್ವರ: ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂ ಜೇಶ್ವರ ಸಬ್ ಟ್ರಷರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ತಾಲೂಕು ಸಮಿತಿ ಅಧ್ಯಕ್ಷ ವಿಘ್ನೇಶ್ವರ ಭಟ್ ಕೆದುಕ್ಕೋಡಿ ಅಧ್ಯಕ್ಷತೆ ವಹಿಸಿದ್ದು, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಟಿ. ನಾರಾಯಣ ಭಟ್ ಉದ್ಘಾಟಿಸಿದರು. ಎಡ, ಐಕ್ಯರಂಗಗಳ ದುರಾಡಳಿತದ ಪರಿಣಾಮ ಕೇರಳದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು, ಪಿಂಚಣಿದಾರರ ತುಟ್ಟಿಭತ್ತೆಯನ್ನು ತಡೆಹಿಡಿಯಲಾಗಿದೆ. ವಿವಿಧ ಸವಲತ್ತುಗಳನ್ನು ಕಡಿತಗೊಳಿಸಲಾಗಿದೆ ಎಂದು ಪದಾಧಿಕಾರಿಗಳು ದೂರಿದರು. ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್  ಬಾಡೂರು ಮಾತನಾಡಿದರು. ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಶುಭ ಕೋರಿದರು. ಬಿಎಂಎಸ್ ವಲಯ ಉಪಾಧ್ಯಕ್ಷ ಉಪಸ್ಥಿತರಿದ್ದರು. ತಾಲೂಕು ಪೆನ್ಶನರ್ಸ್ ಸಂಘದ ಉಪಾಧ್ಯಕ್ಷ ಶ್ರೀಧರ್ ರಾವ್ ಸ್ವಾಗತಿಸಿ, ವೆಂಕಪ್ಪ ಶೆಟ್ಟಿ ವಂದಿಸಿದರು.

RELATED NEWS

You cannot copy contents of this page