ಬದಿಯಡ್ಕ: ಪೆರಡಾಲ ಪರಿಶಿಷ್ಟ ವರ್ಗ ಕಾಲನಿಯ ಕುಡಿಯುವ ನೀರಿನ ಮೋಟಾರ್ ಪಂಪ್ ಕಳವುಗೈದ ಪ್ರಕರಣದಲ್ಲಿ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಬದಿಯಡ್ಕ ಈಸ್ಟ್ ಕಮಿಟಿ ಒತ್ತಾಯಿಸಿದೆ. ಕಳವಿಗೆ ಸಹಾಯವೊದಗಿಸಿರುವುದು ಯಾವ ಸದಸ್ಯನೆಂದು ಪಂಚಾಯತ್ ಜನರಿಗೆ ತಿಳಿಸಬೇಕೆಂದೂ ಇಲ್ಲದಿದ್ದಲ್ಲ್ಲಿ ಎಲ್ಲಾ ಸದಸ್ಯರನ್ನು ಜನರು ಸಂಶಯಿಸುವರೆಂದು ಸಭೆ ಅಭಿಪ್ರಾಯಪಟ್ಟಿದೆ.
ಸಭೆಯಲ್ಲಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಗೋಪಾಲಕೃಷ್ಣ, ಭಾಸ್ಕರ, ಬಾಲಕೃಷ್ಣ ಶೆಟ್ಟಿ, ಅವಿನಾಶ್ ರೈ ಮಾತನಾಡಿದರು.