ಪೆರಡಾಲದಲ್ಲಿ ವಸಂತ ವೇದಪಾಠ ಶಿಬಿರ ಸಮಾರೋಪ

ಬದಿಯಡ್ಕ: ಉತ್ತಮ ವಿಚಾರ, ಚಿಂತನೆಗಳನ್ನು ಮನದಲ್ಲಿ ಅಳವಡಿಸಿಕೊಂಡು ಶ್ರಮದ ಜೀವನ, ಅಧ್ಯಯನದಿಂದ ನಾವು ಸಾಧಕರಾಗಲು ಸಾಧ್ಯವಿದೆ. ಮಗುವಿಗೆ ಸರಿಯಾದ ಸಂಸ್ಕಾರವನ್ನು ನೀಡಿದಾಗ ಆ ಮಗುವಿನ ಭವಿಷ್ಯ ಉಜ್ವಲವಾಗಿ ಬೆಳಗುತ್ತದೆ ಎಂದು ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು.
ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ಆಶ್ರಯದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆದ ವಸಂತವೇದಪಾಠ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಹಿರಿಯರಾದ ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ ಮಾತನಾಡಿ 60 ವರ್ಷಗಳಿಂದ ನಡೆದುಬರುತ್ತಿರುವ ವೇದ ಶಿಬಿರವು ನಿರಂತರವಾಗಿ ನಡೆಯಬೇಕು. ಇಲ್ಲಿನ ವೇದಪಾಠ ಶಾಲೆಯು ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದೆ. ನಮ್ಮೊಳ ಗಿನ ನಕಾರಾತ್ಮಕ ಚಿಂತನೆಗಳನ್ನು ದೂರವಿಟ್ಟು ಸಕಾರಾತ್ಮ ಚಟುವಟಿಕೆ ಗಳಿಗೆ ನೀಡುವ ಪ್ರೋತ್ಸಾಹವು ಭವಿಷ್ಯಕ್ಕೆ ಉತ್ತಮವಾಗಲಿದೆ ಎಂದರು. ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾದಿsಕಾರಿ ವೈ.ಕೆ.ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು.
ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಾಠಶಾಲಾ ಗುರುಗಳಾದ ಮಹಾಗಣಪತಿ ಅಳಕ್ಕೆ ವರದಿ ಮಂಡಿಸಿದರು. ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ಸ್ವಾಗತಿಸಿ, ಪಾಠಶಾಲಾ ಗುರುಗಳಾದ ಮುರಳೀಧರ ಅಳಕ್ಕೆ ವಂದಿಸಿದರು. 3 ತರಗತಿಗಳಲ್ಲಾಗಿ ವೇದವಿದ್ಯೆಯನ್ನು ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸುಬ್ರಹ್ಮಣ್ಯ ಪ್ರಸಾದ ನೀರ್ಚಾಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page