ಪೆರಡಾಲ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ದುಸ್ಥಿತಿ ಯಲ್ಲಿರುವ ದೇವಾಲಯಗಳು ಜೀರ್ಣೋದ್ಧಾರ ಗೊಳ್ಳಬೇಕಾದರೆ ದೇವತಾಶಕ್ತಿಯ ಪ್ರೇರಣೆ ಇರುತ್ತದೆ. ಯುವಶಕ್ತಿ ಹಾಗೂ ಮಾತೃ ಶಕ್ತಿ ಬಲಿಷ್ಠವಾಗಬೇಕು. ದೇವರ ನಾಮಜಪ ಪ್ರತಿ ಮನೆಯಲ್ಲಿ ಅನುರಣಿಸಬೇಕು ಎಂದು ಉದ್ಯಮಿ ಮಧುಸೂದನ ಆಯರ್ ಮಂಗಳೂರು ಅಭಿಪ್ರಾಯಪಟ್ಟರು. ನಿನ್ನೆ ಶಿವರಾತ್ರಿ ಪ್ರಯುಕ್ತ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಜರಗಿದ ಜೀರ್ಣೋದ್ಧಾರ ನಿಧಿ ಕೂಪನ್, ಧಾರ್ಮಿಕ ಕಾರ್ಯ ಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಿರಿಯ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಮಧುಸೂದನ ಆಯರ್, ರಾಜೇಶ್ ಮಾಸ್ತರ್, ಚಂದ್ರಹಾಸ ರೈ ಪೆರಡಾಲಗುತ್ತು, ವೆಂಕಟಕೃಷ್ಣ ಭಟ್ ಮಕ್ಕಿಕ್ಕಾನ, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಉಪಸ್ಥಿತರಿದ್ದರು.
ನಿರಂಜನ ರೈ ಪೆರಡಾಲ ಪ್ರಸ್ತಾಪಿಸಿದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಸ್ವಾಗತಿಸಿ, ಜೀರ್ಣೋ ದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲಗುತ್ತು ವಂದಿಸಿದರು. ಗಣೇಶ್ ಭಟ್ ಕಡಪ್ಪು, ವಿ.ಬಿ. ಪಟ್ಟಾಜೆ, ಭಾಸ್ಕರ ಬಿ ಉಪಸ್ಥಿತರಿ ದ್ದರು. ಮಹಾಶಿವರಾತ್ರಿ ಪ್ರಯುಕ್ತ ಕ್ಷೇತ್ರದಲ್ಲಿ ನಿನ್ನೆ ಗಣಪತಿಹೋಮ, ಶತರುದ್ರಾಭಿಷೇಕ, ಭಜನೆ, ತುಲಾಭಾರ, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀದೇವರ ಭೂತಬಲಿ ನಡೆಯಿತು.