ಪೆರಡಾಲ ಕ್ಷೇತ್ರದಲ್ಲಿ ಶಕ್ತಿ ಪಂಚಾಕ್ಷರಿ ಯಾಗ ಆ. 17ರಂದು: ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಹಿನ್ನೆಲೆಯಲ್ಲಿ ಲೋಕ ಕಲ್ಯಾಣಾರ್ಥ ಆಗಸ್ಟ್ 17ರಂದು ಶಕ್ತಿ ಪಂಚಾಕ್ಷರಿ ಯಾಗ ಕ್ಷೇತ್ರದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರ ಪಿ.ಜಿ. ಜಗನ್ನಾಥ ರೈ, ಸೀತಾರಾಮ ನವಕ್ಕಾನ, ಕೃಷ್ಣ ಬದಿಯಡ್ಕ, ಟಿ.ಕೆ. ನಾರಾಯಣ ಭಟ್ ಪಂಜಿತ್ತಡ್ಕ, ಪಿ.ಜಿ. ಚಂದ್ರಹಾಸ ರೈ, ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಪದಾಧಿಕಾರಿಗಳಾದ ಶ್ರೀಶ ಕುಮಾರ್ ಪಂಜಿತ್ತಡ್ಕ, ಗಣೇಶ್ ಪ್ರಸಾದ್ ಕಡಪ್ಪು, ಜಗನ್ನಾಥ ರೈ ಕೊರೆಕ್ಕಾನ, ಭಾಸ್ಕರ ಪಂಜಿತ್ತಡ್ಕ, ಸತೀಶ್ ಪುದ್ಯೋಡು, ಜಗದೀಶ್ ಪೆರಡಾಲ ಸಹಿತ ಹಲವರು ಭಾಗವಹಿಸಿದರು.