ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ನೇತಾರನೂ, ಕಾಞಂಗಾಡ್ ಬ್ಲೋಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಮಣಿಕಂಠನ್‌ರನ್ನು ರಾಜ್ಯ ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಮಣಿಕಂಠನ್ ರನ್ನು ಬ್ಲೋಕ್ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಹಾಗೂ ಸದಸ್ಯತ್ವದಿಂದ ಹೊರಹಾಕಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನೇತಾರ ನ್ಯಾಯವಾದಿ ಎಂ.ಕೆ. ಬಾಬುರಾಜ್ ರಾಜ್ಯ ಚುನಾವಣಾ ಆಯೋಗವನ್ನು ಸಮೀಪಿಸಿದ್ದರು. ಕೆ. ಮಣಿಕಂಠನ್ ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯನಾಗಿದ್ದಾರೆ. ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಣಿಕಂಠನ್ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ೧೪ನೇ ಆರೋಪಿಯಾದ ಮಣಿಕಂಠನ್‌ಗೆ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿತ್ತು. ಅನಂತರ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದ್ದು ಆರೋಪಿಗಳಾದ ನೇತಾರರಿಗೆ ಜಾಮೀನು ಮಂಜೂರುಮಾಡ ಲಾಗಿದೆ. ಬಾಬುರಾಜ್‌ರ ಅರ್ಜಿ ಯನ್ನು ಚುನಾವಣಾ ಆಯೋಗ ಅಂಗೀಕರಿಸುವುದರೊಂದಿಗೆ ಮುಂ ದಿನ ಚುನಾವಣೆಗಳಲ್ಲಿ ಸ್ಪರ್ಧಿಸಲು ಮಣಿಕಂಠನ್‌ಗೆ ಅಸಾಧ್ಯವಾಗಲಿದೆ. ಅರ್ಜಿದಾರನ ಪರವಾಗಿ ಪಿ. ಸಂತೋಷ್ ಕುಮಾರ್ ಹಾಜರಾದರು.
2019 ಫೆಬ್ರವರಿ 17ರಂದು ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಬರ್ಬರವಾಗಿ ಕಡಿದು ಕೊಲೆಗೈ ಯ್ಯಲಾಗಿದೆ. ಏಚಿಲಡ್ಕ ರಸ್ತೆಯಲ್ಲಿ ಕಾರಿನಲ್ಲಿ ತಲುಪಿದ ತಂಡ ಇವರಿಬ್ಬರನ್ನು ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಆಕ್ರಮಿಸಿತ್ತು. ಇದರಿಂದ ಗಂಭೀರ ಗಾಯಗೊಂಡ ಕೃಪೇಶ್ ಘಟನೆ ಸ್ಥಳದಲ್ಲಿ ಮೃತಪಟ್ಟಿದ್ದರು. ಶರತ್‌ಲಾಲ್‌ರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ಸಾವು ಸಂಭವಿಸಿತ್ತು.