ಪೆರ್ಮುದೆ ಶಾಲಾ ವಾರ್ಷಿಕೋತ್ಸವ ನಾಳೆ

ಕುಂಬಳೆ: ಪೆರ್ಮುದೆ ಬಿಪಿಪಿ ಎಎಲ್‌ಪಿ ಶಾಲಾ ವಾರ್ಷಿಕೋತ್ಸವ ನಾಳೆ ಸಂಜೆ 5.30ಕ್ಕೆ ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 5.30ಕ್ಕೆ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ರಾತ್ರಿ 7 ಗಂಟೆಗೆ ಸಭೆ ನಡೆಯಲಿದ್ದು ಶಾಸಕ ಎ. ಕೆ. ಎಂ. ಅಶ್ರಫ್ ಉದ್ಘಾಟಿಸುವರು. ಶಾಲಾ ಪ್ರಬಂಧಕ ಇ. ರವಿಶಂಕರ ಭಟ್ ಅಧ್ಯಕ್ಷತೆ ವಹಿಸುವರು. ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ ಕೆ., ಸದಸ್ಯೆ ಇರ್ಶಾನ ಇಸ್ಮಾಯಿಲ್, ಮಂಜೇಶ್ವರ ಉಪಜಿಲ್ಲಾ ವಿದ್ಯಾದಿsಕಾsರಿ ಕೃಷ್ಣಮೂರ್ತಿ ಎಂ. ಎಸ್., ಮಂಜೇಶ್ವರ ಬಿಆರ್‌ಸಿಯ ಬಿಪಿಸಿ ವಿಜಯ ಕುಮಾರ್ ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಯ್ಯಾರು ಎಸ್‌ಆರ್‌ಎಎಲ್‌ಪಿ ಶಾಲೆಯ ರಾಜಗೋಪಾಲ ಎ., ಬಂಬ್ರಾಣ ಜಿಬಿಎಲ್‌ಪಿ ಶಾಲೆಯ ಮುಖ್ಯ ಶಿಕ್ಷಕ ಸತ್ಯಪ್ರಕಾಶ ಇ. ಕೆ., ಪೈವಳಿಕೆ ಪಂ. ಮಾಜಿ ಸದಸ್ಯ ಎಂ. ಕೆ. ಅಮೀರ್, ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ರವಿಪ್ರಸಾದ್ ಭಾಗವಹಿಸುವರು.
2022-23ನೇ ಶೈಕ್ಷಣಿಕ ವರ್ಷದ ಎಲ್‌ಎಸ್‌ಎಸ್ ಪರೀಕ್ಷಾ ವಿಜೇತರಾದ ಹೃತಿಕ, ಕೌಶಿಕ್‌ರಾಜ್, ಲೀಷ್ಮಾ ಎಂಬಿವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಶಾಲಾ ಅಡುಗೆ ಕಾರ್ಮಿಕೆ ಮೆಟಿಲ್ಡಾ ಡಿಸೋಜವರಿಗೆ ಸೇವಾ ಗೌರವ ಅರ್ಪಿಸಲಾಗುವುದು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಠಲ, ಮಾತೃ ಸಂಘದ ಅಧ್ಯಕ್ಷೆ ಚೇತನ, ಪ್ರಿ-ಪ್ರೆöÊಮರಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನಿತಾ ಶುಭಾಶಂಸನೆಗೈಯ್ಯುವರು. ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಭಾಗವಹಿಸುವರು. ರಕ್ಷಕರಿಂದ, ವಿದ್ಯಾರ್ಥಿಗÀಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page