ಪೈವಳಿಕೆ: ಕಳವಿಗೀಡಾದ ಮನೆಯಲ್ಲಿ ಬೆರಳಚ್ಚು ತಜ್ಞರಿಂದ ತನಿಖೆ

ಪೈವಳಿಕೆ: ಪೈವಳಿಕೆ ಕಳಾಯಿ ಯಲ್ಲಿ 50,000 ರೂ. ಹಾಗೂ 25,000 ರೂ. ಮೌಲ್ಯದ ಸಿಸಿ ಟಿವಿ ಉಪಕರಣಗಳು ಕಳವಿಗೀಡಾದ ಮನೆ ಯಲ್ಲಿ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ನಿನ್ನೆ ತಪಾಸಣೆ ನಡೆಸಿದೆ. ಪೈವಳಿಕೆ ಕಳಾಯಿ ರಸ್ತೆಯ ಅಜೆಕ್ಕಳ ಎಂಬಲ್ಲಿನ ಅಶೋಕ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಆರೋ ಪಿಗಾಗಿ ಶೋಧ ನಡೆಸಲಾಗುತ್ತಿದೆ.
ಈ ತಿಂಗಳ 7ರಂದು ರಾತ್ರಿ ಮನೆ ಯಿಂದ ಕಳವು ನಡೆದಿತ್ತು. ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ
ಅವರ ತಂದೆ ಮಾತ್ರವೇ ವಾಸಿಸುತ್ತಿದ್ದಾರೆ. ಅವರಿಗೆ ಆಹಾರ ನೀಡಲು 8ರಂದು ಬೆಳಿಗ್ಗೆ ಸಮೀಪದ ಸಂಬAಧಿಕ ತಲುಪಿದಾಗ ಮನೆಯಿಂದ ಕಳವು ನಡೆದ ವಿಷಯ ತಿಳಿದು ಬಂದಿತ್ತು. ಕಳೆದ 7 ತಿಂಗಳ ಮಧ್ಯೆ ಈ ಮನೆಯಿಂದ ಇದು ಎರಡನೇ ಬಾರಿ ಕಳವು ನಡೆದಿದೆ. ಈ ಹಿಂದೆ ಅಶೋಕ್ ಕುಮಾರ್ ಶೆಟ್ಟಿಯವರ ತಂದೆಯನ್ನು ನೋಡಿಕೊಳ್ಳಲು ನೇಮಿಸಿದ್ದ ಕರ್ನಾಟಕ ನಿವಾಸಿ ಮನೆಯಿಂದ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದನು. ಬಳಿಕ ಸೆರೆಗೀಡಾದ ಆರೋಪಿ ಈಗಲೂ ಜೈಲಿನಲ್ಲಿದ್ದಾನೆ.

RELATED NEWS

You cannot copy contents of this page