ಪೈವಳಿಕೆ ವಿಲ್ಲೇಜ್‌ನಲ್ಲಿ ಬ್ಯಾಂಕ್ ಸಾಲ ಮರುಪಾವತಿ ಅದಾಲತ್

ಉಪ್ಪಳ: ಪೈವಳಿಕೆ ಗ್ರೂಪ್ ವಿಲ್ಲೇಜಿಗೆ ಒಳಪಟ್ಟ ಪೈವಳಿಕೆ ಹಾಗೂ ಚಿಪ್ಪಾರ್ ವಿಲ್ಲೇಜ್ ಗಳಲ್ಲಿ ಬ್ಯಾಂಕ್ ಸಾಲ ಪಾವತಿಸಲು ಬಾಕಿ ಇದ್ದವರಿಗಾಗಿ ಬ್ಯಾಂಕ್ ಸಾಲ ಮರುಪಾವತಿ ಅದಾಲತನ್ನು ಪೈವಳಿಕೆ ಗ್ರೂಪ್ ವಿಲೇಜ್ ಕಚೇರಿಯಲ್ಲಿ ನಿನ್ನೆ ನಡೆಸಲಾಯಿತು. ಕೆನರಾ ಬ್ಯಾಂಕ್ ಪೈವಳಿಕೆ ಬ್ರಾಂಚ್, ಕೇರಳ ಗ್ರಾಮೀಣ ಬ್ಯಾಂಕ್, ಸಜಂಕಿಲ ಬ್ರಾಂಚ್ ಬಾಯಾರ್ ಪದವು, ಕೇರಳ ಬ್ಯಾಂಕ್ ಉಪ್ಪಳ ಬ್ರಾಂಚ್ ಎಂಬಿ ಬ್ಯಾಂಕ್‌ಗಳಲ್ಲಿ ಒಳಪಟ್ಟ ಸಾಲಗಾರರು ಭಾಗವಹಿಸಿದರು. ತಹಶೀಲ್ದಾರ್, ರೆವೆನ್ಯೂ ರೆಕವರಿ ಕಾಸರಗೋಡು ಶಿಬು, ಕೆನರಾ ಬ್ಯಾಂಕ್ ಪೈವಳಿಕೆ ಶಾಖೆ ಮೆನೇಜರ್ ಪ್ರವೀಣ್ ಕುಮಾರ್, ಕೇರಳ ಗ್ರಾಮೀಣ ಬ್ಯಾಂಕ್, ಸಜಂಕಿಲ ಶಾಖೆ ಬಾಯಾರ್‌ಪದವು ವೆiನೇಜರ್ ಉಮಾಪತಿ, ಪೈವಳಿಕೆ ಗ್ರೂಪ್ ವಿಲೇಜ್ ಆಫೀಸರ್ ಮೊಯಿದೀನ್ ಕುಂಞ, ವಿಲೇಜ್ ಸಿಬ್ಬಂದಿಗಳಾದ ನವ್ಯ, ಬೈಜು , ಅಶ್ವಿತ್ ನೇತೃತ್ವ ನೀಡಿದರು. ಒಟ್ಟು ೧೫ ಕೇಸುಗಳಲ್ಲಿ ತೀರ್ಪು ಮಾಡಲಾಯಿತು.

You cannot copy contents of this page