ಪೊಡಿಪ್ಪಳ್ಳ ಕ್ಷೇತ್ರ ಧ್ವಜಸ್ತಂಭಕ್ಕೆ ಮುಹೂರ್ತ
ಕುಂಬ್ಡಾಜೆ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ನವೀಕರಣೆ ಅಂಗವಾಗಿ ಧ್ವಜಸ್ತಂಭ ಸ್ಥಾಪಿಸಲು ಮರ ಮುಹೂರ್ತ ಇಂದು ಬೆಳಿಗ್ಗೆ ಚುಳ್ಳಿಕ್ಕರೆಯಲ್ಲಿ ನಡೆಯಿತು. ಕ್ಷೇತ್ರ ಆಡಳಿತ ಮೊಕ್ತೇಸರ ರಾಕಲ್ ಅಡ್ಯಂತ್ತಾಯ, ಆಚಾರ ಸ್ಥಾನಿಕರು, ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು ನವೀಕರಣ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ, ಡಾ. ಶ್ರೀಧರ ಏತಡ್ಕ, ವಿವಿಧ ಸಮಿತಿ ಪದಾಧಿಕಾರಿಗಳು, ತಳಂಗರೆ ಪಾಲಕುನ್ನು ಕ್ಷೇತ್ರ ಆಚಾರ ಸ್ಥಾನಿಕರು, ಉತ್ತರ ಮಲಬಾರ್ ತೀಯ ಸಮುದಾಯ ಕ್ಷೇತ್ರ ಸಂರಕ್ಷಣೆ ಸಮಿತಿ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದರು. ಸಂಜೆ ನಾರಂಪಾಡಿಯಿಂದ ಮೆರವಣಿಗೆ ನಡೆಯಲಿದೆ.