ಪೊಲೀಸರು  ಹಿಂಬಾಲಿಸುತ್ತಿದ್ದ ಕಾರು ಮಗುಚಿ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣ: ಸರಕಾರದಿಂದ ಸ್ಪಷ್ಟೀಕರಣ ಕೇಳಿದ ಹೈಕೋರ್ಟ್

ಕುಂಬಳೆ: ಪೊಲೀಸರು ಹಿಂಬಾಲಿ ಸುತ್ತಿದ್ದ ವೇಳೆ ಕಾರು ಮಗಚಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬಗ್ಗೆ ಹೈಕೋರ್ಟ್ ರಾಜ್ಯ ಸರಕಾರದಿಂದ ಸ್ಪಷ್ಟೀಕರಣೆ ಕೇ ಳಿದೆ.  ಕಳೆದವರ್ಷ ಅಗೋಸ್ತ್ ೨೫ ರಂದು ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿ ಕುಂಬಳೆ ಪೇರಾಲ್‌ಕಣ್ಣೂರು ನಿವಾಸಿ ಫರ್ಹಾಸ್ (೧೭) ಅಂದು ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸ್ನೇಹಿತರ ಜತೆ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ  ಆ ದಾರಿಯಾಗಿ ಪೊಲೀಸರು ಬಂದಾಗ ಅವರನ್ನು ಕಂಡು ಹೆದರಿ ಕಾರನ್ನು ಮುಂದಕ್ಕೆ ಚಲಾಯಿಸಿದಾಗ ಪೊಲೀಸರು ಆ ಕಾರನ್ನು ತಮ್ಮ ವಾಹನದಲ್ಲಿ ಹಿಂ ಬಾಲಿಸಿರುವುದಾಗಿ ಆರೋಪಿಸಲಾಗಿತ್ತು. ಆ ವೇಳೆ ಆ ಕಾರು ಅಪಘಾತಕ್ಕೀಡಾಗಿ ಅದರಲ್ಲಿದ್ದ ಫರ್ಹಾಸ್ ಗಂಭೀರ ಗಾಯಗೊಂಡು ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಅಗೋಸ್ತ್ ೨೯ರಂದು ಸಾವನ್ನಪ್ಪಿದ್ದನು. ಆ ಘಟನೆಗೆ ಸಂಬಂಧಿಸಿ ಕಾರನ್ನು ಹಿಂಬಾಲಿಸಿದ ಪೊಲೀಸರ ವಿರುದ್ಧ ಇಲಾಖಾ ಮಟ್ಟದ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು. ಮಾತ್ರವಲ್ಲದೆ ನಷ್ಟ ಪರಿಹಾರ ವನ್ನೂ ನೀಡಬೇಕೆಂದು ಕೋರಿ  ಮೃತ ಫರ್ಹಾಸ್‌ನ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿ ಸಿದ ಹೈಕೋರ್ಟ್  ಆ ಬಗ್ಗೆ ಸ್ಪಷ್ಟೀಕರಣ ನೀಡುವ ಅಫಿದಾವಿತ್ ಸಲ್ಲಿಸುವಂತೆ ರಾಜ್ಯ ಸರಕಾರದ ಕಾರ್ಯದರ್ಶಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗೆ ಬಳಿಕ ನಿರ್ದೇಶ ನೀಡಿದೆ

You cannot copy contents of this page