ಪೊಲೀಸ್ ಆಫೀಸರ್ಸ್ ಅಸೋಸಿಯೇಶನ್‌ನಿಂದ ಸಾಮೂಹಿಕ ಓಟ
ಕಾಸರಗೋಡು: ಕೇರಳ ಪೊಲೀಸ್ ಆಫೀಸರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ಈ ತಿಂಗಳ 13 ರಂದು ನಡೆಯಲಿರುವ ಜಿಲ್ಲಾ ಸಮ್ಮೇ ಳನದಂಗವಾಗಿ ಮಾದಕ ಪದಾರ್ಥ ವಿರುದ್ಧ ತಿಳುವಳಿಕೆ ಮೂಡಿಸಲು ಕಾಸರಗೋಡು ರೈಲ್ವೇ ನಿಲ್ದಾಣ ಪರಿಸರ ದಿಂದ ಸಾಮೂಹಿಕ ಓಟ ಹಮ್ಮಿಕೊಳ್ಳ ಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಪಿ. ಬಿಜೋಯ್ ಫ್ಲಾಗ್‌ಆಫ್ ಗೈದರು. ಸ್ವಾಗತ ಸಮಿತಿ ಅಧ್ಯಕ್ಷ ಟಿ. ತಂಬಾನ್, ಕೆ.ಪಿ.ಎ. ಜಿಲ್ಲಾಧ್ಯಕ್ಷ ಬಿ. ರಾಜಕುಮಾರ್, ರಾಜೀವನ್, ಕೆ.ಪಿ.ಒ.ಎ ಜಿಲ್ಲಾ ಕಾರ್ಯದರ್ಶಿ ಪಿ. ರವೀಂದ್ರನ್, ಟಿ. ಗಿರೀಶ್ ಬಾಬು, ಎಂ. ಸದಾಶಿವನ್ ನೇತೃತ್ವ ನೀಡಿದರು. ಸಾಮೂಹಿಕ ಓಟ ಹೊಸ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.