ಪೊಲೀಸ್ ಇಲಾಖೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ: ಸಿವಿಲ್ ಪೊಲೀಸ್ ಅಧಿಕಾರಿ ನೇಣು
ಕಾಸರಗೋಡು: ಕೇರಳ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರತ ಪೊಲೀಸರ ಆತ್ಮಹತ್ಯಾ ಪ್ರಕರಣಗಳು ಹೆಚ್ಚುತ್ತಿದೆ. ಎರ್ನಾಕುಳಂ ಪಿರವಂ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಮಮಂಗಲಂ ನಿವಾಸಿ ಬಿಜು(45) ಎಂಬವರು ನಿನ್ನೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದ ಮಾಹಿತಿ ತಿಳಿದು ಸಹೋ ದ್ಯೋಗಿಗಳು ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೈದಿ ರಬೇಕೆಂದು ಪೊಲೀಸರು ಪ್ರಾಥಮಿಕ ಹಂತದಲ್ಲಿ ತಿಳಿದುಕೊಂಡಿದ್ದಾರೆ. ಮೊನ್ನೆ ಮಲಪ್ಪುರಂ ಜಿಲ್ಲೆಯ ಅರಿಕ್ಕೋಡ್ನಲ್ಲಿ ಸಶಸ್ತ್ರ ಪಡೆಯ ಕಮಾಂಡರ್ ಸ್ವಯಂ ಗುಂಡಿಕ್ಕಿ ಆತ್ಮಹತ್ಯೆಗೈದ ಬೆನ್ನಲ್ಲೇ ನಿನ್ನೆ ಈ ಆತ್ಮಹತ್ಯೆ ಘಟನೆ ಸಂಭವಿಸಿದೆ. ಪೊಲೀಸರಿಗೆ ಉದ್ಯೋಗ ಒತ್ತಡ, ಮಾನಸಿಕ ಒತ್ತಡ ಸಹಿತ ಕಿರುಕುಳ ಹೆಚ್ಚುತ್ತಿರುವುದು ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಕಾಸರಗೋಡು: ಕೇರಳ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರತ ಪೊಲೀಸರ ಆತ್ಮಹತ್ಯಾ ಪ್ರಕರಣಗಳು ಹೆಚ್ಚುತ್ತಿದೆ. ಎರ್ನಾಕುಳಂ ಪಿರವಂ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಮಮಂಗಲಂ ನಿವಾಸಿ ಬಿಜು ಎಂಬವರು ನಿನ್ನೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದ ಮಾಹಿತಿ ತಿಳಿದು ಸಹೋ ದ್ಯೋಗಿಗಳು ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೈದಿ ರಬೇಕೆಂದು ಪೊಲೀಸರು ಪ್ರಾಥಮಿಕ ಹಂತದಲ್ಲಿ ತಿಳಿದುಕೊಂಡಿದ್ದಾರೆ. ಮೊನ್ನೆ ಮಲಪ್ಪುರಂ ಜಿಲ್ಲೆಯ ಅರಿಕ್ಕೋಡ್ನಲ್ಲಿ ಸಶಸ್ತ್ರ ಪಡೆಯ ಕಮಾಂಡರ್ ಸ್ವಯಂ ಗುಂಡಿಕ್ಕಿ ಆತ್ಮಹತ್ಯೆಗೈದ ಬೆನ್ನಲ್ಲೇ ನಿನ್ನೆ ಈ ಆತ್ಮಹತ್ಯೆ ಘಟನೆ ಸಂಭವಿಸಿದೆ. ಪೊಲೀಸರಿಗೆ ಉದ್ಯೋಗ ಒತ್ತಡ, ಮಾನಸಿಕ ಒತ್ತಡ ಸಹಿತ ಕಿರುಕುಳ ಹೆಚ್ಚುತ್ತಿರುವುದು ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ.