ಪೊಲೀಸ್ ಠಾಣೆಗೆ ಅತಿಕ್ರಮಿಸಿ ನುಗ್ಗಿ ಪೊಲೀಸ್‌ನ ಕೈ ತಿರುವಿದ ವ್ಯಕ್ತಿ ಬಂಧನ
ಕಾಸರಗೋಡು: ಪೊಲೀಸ್ ಠಾಣೆಗೆ ಅತಿಕ್ರಮಿಸಿ ನುಗ್ಗಿರುವುದನ್ನು ಪ್ರಶ್ನಿಸಿದ ಪೊಲೀಸ್‌ನ ಕೈ ಹಿಡಿದೆಳೆದು ತಿರುವಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೊಲೀಸರು ಅಂಬಲತ್ತರ ತಾಯನ್ನೂರಿನ ಮನೋಜ್ ತೋಮಸ್ (44) ಎಂಬಾತನನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ರಂಜಿತ್ ಎಂಬ ಪೊಲೀಸ್ ಜಿ.ಡಿ. ಚರ್ಚ್‌ನಲ್ಲಿದ್ದರು. ಈ ವೇಳೆ ಠಾಣೆಗೆ ತಲುಪಿದ ಮನೋಜ್ ತೋಮಸ್ ಅನುಮತಿಯಿಲ್ಲದೆ ಒಳಗೆ ಪ್ರವೇಶಿಸಿದ್ದಾನೆ. ಇದನ್ನು ರಂಜಿತ್ ತಡೆದಾಗ ಹೊರಗೆ ಹೋದ ಮನೋಜ್ ತೋಮಸ್ ಮರಳಿ ಬಂದು ರಂಜಿತ್‌ರ ಕೈ ಹಿಡಿದು ತಿರುವಿರುವುದಾಗಿ ದೂರಲಾಗಿದೆ. ವಿಷಯ ತಿಳಿದು ತಲುಪಿದ ಇತರ ಪೊಲೀಸರು ಮನೋಜ್ ತೋಮಸ್‌ನನ್ನು ಕಸ್ಟಡಿಗೆ ತೆಗೆದು ಬಂಧಿಸಿದ್ದಾರೆ. ಬಂಧಿತ ಈತ ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಇದೇ ರೀತಿ ಅತಿಕ್ರಮಿಸಿ ನುಗ್ಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.