ಪೊಲೀಸ್ ಠಾಣೆಗೆ ನುಗ್ಗಿ ಎಸ್‌ಐ, ಪೊಲೀಸ್‌ಗೆ ಹಲ್ಲೆ: ಲಾರಿ ಚಾಲಕ ಸೆರೆ

ಹೊಸದುರ್ಗ: ದೂರು ನೀಡಲಿದೆ ಯೆಂದು ತಿಳಿಸಿ ನೀಲೇಶ್ವರ ಪೊಲೀಸ್ ಠಾಣೆಗೆ ತಲುಪಿ  ಎಸ್‌ಐ ಹಾಗೂ ಪೊಲೀಸ್‌ಗೆ ಹಲ್ಲೆಗೈದ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಚಾಯೋತ್ ಮಾನೂರಿನ ಕಿಳಕ್ಕೇವೀಟಿಲ್ ಕೆ.ವಿ.ಸಂತೋಷ್  (40) ಎಂಬಾತನನ್ನು ಪೊಲೀಸರು ಬಲಪ್ರಯೋಗಿಸಿ ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ದೂರು ನೀಡಲಿದೆಯೆಂದು ತಿಳಿಸಿ ಸಂ ತೋಷ್ ಪೊಲೀಸ್ ಠಾಣೆಗೆ ತಲುಪಿ ದ್ದನು. ದೂರು ಲಿಖಿತವಾಗಿ ನೀಡುವಂತೆ  ಪಿ.ಆರ್.ಒ ಕರ್ತವ್ಯದಲ್ಲಿದ್ದ ಎಎಸ್‌ಐ ಪ್ರಕಾಶನ್ ತಿಳಿಸಿದ್ದರು. ಆದರೆ ಮದ್ಯದ ಅಮಲಿನಲ್ಲಿದ್ದ ಸಂತೋಷ್ ದೂರು ಬರೆದು ನೀಡಲು ಸಿದ್ಧವಾಗದೆ, ಪಿ.ಆರ್.ಒ ಕಚೇರಿ ಕೊಠಡಿಯ ಕುರ್ಚಿ ಮೊದಲಾದವುಗಳನ್ನು ಹಾನಿಗೊಳಿಸಿ ರುವುದಾಗಿ ದೂರಲಾಗಿದೆ. ಬೊಬ್ಬೆ ಕೇಳಿ ತಲುಪಿದ ಎಸ್‌ಐ ಅರುಣ್ ಮೋಹನ್‌ರ ಕಾಲರ್ ಹಿಡಿದೆಳೆದ ಆರೋಪಿ ಸಮವಸ್ತ್ರದ ನೇಮ್ ಪ್ಲೇಟ್  ಹಿಡಿದೆಳೆದು ಹಲ್ಲೆಗೈದಿದ್ದಾನೆ. ತಡೆಯಲು ತಲುಪಿದ ಸಿವಿಲ್ ಪೊಲೀಸ್ ಆಫೀಸರ್ ನಿತೀಶ್‌ರ ಮೇಲೂ ಹಲ್ಲೆಗೈಯ್ಯಲಾಗಿದೆ. ಠಾಣೆಯಲ್ಲಿದ್ದ ಇತರ ಪೊಲೀಸರು ಬಲಪ್ರಯೋಗಿಸಿ ಸಂತೋಷ್‌ನನ್ನು ಬಂಧಿಸಿದ್ದಾರೆ. ಹಲ್ಲೆಯಿಂದ ಗಾಯ ಗೊಂಡ ಪೊಲೀಸರು ನೀಲೇಶ್ವರ ತಾಲೂಕು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

You cannot copy contents of this page