ಪೊಲೀಸ್ ತಂಡದ ಮೇಲೆ ಕಾರು ಚಲಾಯಿಸಲೆತ್ನಿಸಿದ ಮಾದಕದ್ರವ್ಯ ತಂಡ
ಮಂಜೇಶ್ವರ: ಮಾದಕದ್ರವ್ಯ ಸಾಗಾಟ ತಂಡವನ್ನು ಸೆರೆಹಿಡಿಯುವ ಯತ್ನದ ವೇಳೆ ಆ ತಂಡದವರು ಪೊಲೀಸರ ಮೇಲೆ ಕಾರು ಚಲಾಯಿಸ ಲೆತ್ನಿಸಿದ ಘಟನೆ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ ಮೊನ್ನೆ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಕರ್ತವ್ಯ ನಿರತರಾಗಿದ್ದ ಜಿಲ್ಲಾ ಪೊಲೀಸ್ ಮುಖ್ಯ ಕಚೇರಿಯ ಸಿವಿಲ್ ಪೊಲೀಸ್ ಆಫೀಸರ್ ಪುಲ್ಲೂರು ಕಣ್ಣತ್ತೋಡಿಯ ಕೆ.ವಿ. ನಿತಿನ್ (32) ಗಾಯಗೊಂ ಡಿದ್ದು, ಅವರಿಗೆ ಉಪ್ಪಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ರಾತ್ರಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸ ಣೆಗಾಗಿ ಅದರ ಬಾಗಿಲು ತೆರೆಯುವಂತೆ ಸೂಚಿಸಿದಾಗ ಆ ಕಾರು ಪೊಲೀಸರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ತಕ್ಷಣ ಪೊಲೀಸರು ತಮ್ಮ ವಾಹನದಲ್ಲಿ ಆ ಕಾರನ್ನು ಹಿಂಬಾಲಿಸಿದರೂ ಅದನ್ನು ವಶಪ ಡಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಸಂಬಂಧಿಸಿ ನರಹತ್ಯಾಯತ್ನ, ಪೊಲೀ ಸರ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೆಕ್ಷನ್ಗಳ ಪ್ರಕಾರ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.