ಪೊಲೀಸ್ ತಪಾಸಣೆ ವೇಳೆ ಹೋಟೆಲ್‌ನಿಂದ ಜಿಗಿದು ಪರಾರಿಯಾದ ನಟ ಶೈನ್ ಠಾಣೆಯಲ್ಲಿ ಹಾಜರು
ಕೊಚ್ಚಿ: ಮಾದಕದ್ರವ್ಯ ತಪಾ ಸಣೆಗೆಂದು ಕೊಚ್ಚಿಯ ಹೋಟೆ ಲೊಂದಕ್ಕೆ ಬಂದ ಪೊಲೀಸರನ್ನು ಕಂಡು ಅಲ್ಲಿಂದ ಜಿಗಿದು ಪರಾರಿ ಯಾದ ಮಲೆಯಾಳಂ ಸಿನಿಮಾ ನಟ ಶೈನ್ ಟೋಂ ಚಾಕೋ ಇಂದು ಬೆಳಿಗ್ಗೆ ಕೊಚ್ಚಿ ನೋರ್ತ್ ಪೊಲೀಸ್ ಠಾಣೆಯಲ್ಲಿ ನೇರವಾಗಿ ಹಾಜರಾಗಿ ದ್ದಾರೆ. ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಹೋಟೆಲ್‌ನಿಂದ ಪರಾರಿಯಾದ ಶೈನ್ ಟೋಂನ ಪತ್ತೆಗಾಗಿ ಪೊಲೀ ಸರು ವ್ಯಾಪಕ ಶೋಧ ನಡೆಸಿದ್ದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾ ಗಲಿಲ್ಲ. ಇಂದು ಮುಂಜಾನೆ ಪೊಲೀಸ್ ಠಾಣೆಯಲ್ಲಿ ಹಾಜರಾಗು ವಂತೆ ನಿರ್ದೇಶಿಸಿ ಶೈನ್ ಟೋಂ ಮನೆ ಬಾಗಿಲಿಗೆ ನೋಟೀಸು ಲಗತ್ತಿಸಿ ದ್ದರು. ಅದರಂತೆ ಶೈನ್ ಟೋಂ ಇಂದು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಆ ವೇಳೆ ಅವರನ್ನು ಮಾಧ್ಯಮದವರು ಸುತ್ತುವರಿದು ಹಲವು ಪ್ರಶ್ನೆ ಕೇಳಿದ್ದರೂ ಅದಕ್ಕೆ ಉತ್ತರಿಸದೆ ಶೈನ್ ಟೋಂ ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿ ದರು. ಸೆಂಟ್ರಲ್ ಎಸಿಪಿ ಸಿ. ಜಯ ಕುಮಾರ್ ನೇತೃತ್ವದ ಪೊಲೀಸರು ಶೈನ್ ಟೋಂನ್ನು ವಿಚಾರಣೆಗೊಳ ಪಡಿಸುತ್ತಿದ್ದಾರೆ. ಇದರ ಜತೆಗೆ ನಾರ್ಕೋಟಿಕ್ ಸೆಲ್ ಎಸಿಪಿ ಕೆ.ಎ. ಅಬ್ದುಲ್ ಸಲಾಂ ಕೂಡಾ ಠಾಣೆಗೆ ಆಗಮಿಸಿ ಈ ಪ್ರಕರಣದ ಬಗ್ಗೆ ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ.