ಪೊಲೀಸ್ ಸಾವನ್ನಪ್ಪಿದ ಪ್ರಕರಣ : ಕಾರಣ ತಲೆಗೆ ಬಿದ್ದು ಗಂಭೀರ ಏಟು
ಕಾಸರಗೋಡು: ನಗರದ ಕರಂದಕ್ಕಾಡ್‌ನ ಉಮಾ ನರ್ಸಿಂಗ್ ಹೋಮ್ ಬಳಿ ಶನಿವಾರದಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಕಾಸರಗೋಡು ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ ಸಿವಿಲ್ ಪೊಲೀಸ್ ಆಫೀಸರ್ ಆಲಪ್ಪುಳ ಮಣ್ಣಂಜೇರಿ ವಡಕನ್ ಆರ‍್ಯಾಡ್ ಕುಟ್ಟನಾಡನ್ ಪರಂಬಿಲ್‌ನ ಕೆ.ಕೆ. ಸುಧೀಶ್ (೪೦)ರ ಸಾವಿಗೆ ಕಾರಣ ತಲೆಗೆ ಗಂಭೀರ ಏಟು ಬಿದ್ದಿರುವುದೇ ಆಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ನಿನ್ನೆ ಮರಣೋತ್ತರ ಪರೀಕ್ಷೆಗೊಳಪಡಿ ಸಲಾಗಿದೆ. ಬಳಿಕ ಮೃತದೇಹವನ್ನು ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ತಂದು ಅಂತ್ಯ ದರ್ಶನಕ್ಕಿರಿಸಿದ ನಂತರ ಊರಿಗೆ ಸಾಗಿಸಲಾಯಿತು.
ಸುಧೀಶ್ ಶನಿವಾರದಂದು ಅಪರಾಹ್ನ ಉಮಾ ನರ್ಸಿಂಗ್ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪvಯಾಗಿದ್ದರು. ಈ ಆಸ್ಪತ್ರೆ ವರ್ಷಗಳಿಂದ ಕಾರ್ಯವೆಸಗದೆ ಮುಚ್ಚಿಕೊಂಡ ಸ್ಥಿತಿಯಲ್ಲಿದೆ. ಆದರೆ ಅದರ ಬಾಗಿಲು ತೆರೆದ ಸ್ಥಿತಿಯಲ್ಲಿರು ವುದರಿಂದಾಗಿ ಅದರ ಒಳಗಿಂದ ಮೇಲ್ಗಡೆ ಸಾಗಬಹುದಾಗಿದೆ. ಸುಧೀಶ್ ಕಟ್ಟಡದ ಮೇಲೆ ಹೋಗಿದ್ದ ವೇಳೆ ಅವರು ಆಕಸ್ಮಾತ್ ಜಾರಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಸಂಶಯಿಸುತ್ತಿದ್ದಾರೆ. ಸುಧೀಶ್ ಕೆಲವು ಸಮಯದಿಂದ ಪತ್ನಿಯಿಂದ ದೂರ ಸರಿದು ನಿಂತಿರುವುದಾಗಿಯೂ ತಿಳಿಯಲಾಗಿದೆ.
ಈ ದಂಪತಿಗೆ ಮಕ್ಕಳಿಲ್ಲ. ಇವರು ಕಳೆದ ೨೦ ದಿನಗಳಿಂದ ಕರ್ತವ್ಯಕ್ಕೂ ಹಾಜರಾಗಿರಲಿಲ್ಲ. ರಜೆಗಾಗಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.