ಪೊಲೀಸ್ ಸ್ಪೆಷಲ್ ಡ್ರೈವ್: ಹಲವು ಪ್ರಕರಣ ದಾಖಲು
ಕಾಸರಗೋಡು: ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಹಲವು ಕೇಸುಗಳನ್ನು ದಾಖಲಿಸ ಲಾಗಿದೆ. ಈ ಸಂಬಂಧ 1646 ವಾಹನಗಳನ್ನು ತಪಾಸಣೆಗೊಳಪಡಿಸ ಲಾಯಿತು. 115 ವಾರಂಟ್‌ಗಳನ್ನು ಜ್ಯಾರಿಗೊಳಿಸಲಾಗಿದೆ. ಗೂಂಡಾ ಯಾದಿಯಲ್ಲಿ ಒಳಪಟ್ಟ 61 ಮಂದಿಯನ್ನು ಮತ್ತೆ ಪರಿಶೀಲನೆ ಗೊಳಪಡಿಸಲಾಯಿತು.
ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ 67 ಮಂದಿ, ಮದ್ಯದಮಲಿನಲ್ಲಿ ವಾಹನ ಚಲಾಯಿಸಿದ ಬಗ್ಗೆ 31 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಹೊರತಾಗಿ ಮಾದಕ ದ್ರವ್ಯ ಆಕ್ಟ್ ಪ್ರಕಾರ 8ಕೇಸುಗಳು ಹಾಗೂ ಎಕ್ಸ್‌ಪ್ಲೋಸಿವ್ ಆಕ್ಟ್ ಪ್ರಕಾರ 5 ಕೇಸುಗಳನ್ನು ದಾಖಲಿಸಲಾಗಿದೆ. ಅನಧಿಕೃತವಾಗಿ ಕಾರ್ಯವೆಸಗುತ್ತಿದ್ದ 5 ಕೋರೆಗಳನ್ನು ಈ ಸಮಯದಲ್ಲಿ ಪತ್ತೆಹಚ್ಚಲಾಗಿದೆ. ಇತರ ಸ್ಪೆಷಲ್ ಆಕ್ಟ್ಸ್ ಪ್ರಕಾರ ೪೫ ಕೇಸುಗಳನ್ನು ದಾಖಲಿಸಲಾಯಿತು. ಮಾತ್ರವಲ್ಲದೆ 45 ಹೊಟೇಲ್ ಮತ್ತು ಲಾಡ್ಜ್‌ಗಳ ತಪಾಸಣೆಯನ್ನೂ ನಡೆಸಲಾಗಿದೆ.