ಪೋಕ್ಸೋ ಪ್ರಕರಣ: ನಟಿಯ ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣನೆ ಮುಂದೂಡಿಕೆ
ಕಾಸರಗೋಡು: ಮಲೆಯಾಳಂ ಸಿನಿಮಾ ನಟ, ಸಿಪಿಎಂ ಶಾಸಕರೂ ಆಗಿರುವ ಮುಖೇಶ್ ಸೇರಿದಂತೆ ಇತರ ಹಲವರ ವಿರುದ್ಧ ಲೈಂಗಿಕ ಶೋಷಣೆ ಆರೋಪದಂತೆ ದೂರು ನೀಡಿದ ನಟಿ ತನ್ನ ವಿರುದ್ಧ ದಾಖಲುಗೊಂಡಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ಪರಿಶೀಲನೆಯನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಅಕ್ಟೋಬರ್ 4ಕ್ಕೆ ಮುಂದೂಡಿದೆ.
ಈ ಅರ್ಜಿಯನ್ನು ನ್ಯಾಯಾಲಯ ನಿನ್ನೆ ಪರಿಗಣನೆಗೆ ತೆಗೆದುಕೊಂಡಿತ್ತು. ಆ ವೇಳೆ ವಾದಿ ಭಾಗದವರು ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ. ಮಾತ್ರವಲ್ಲ ಪೋಕ್ಸೋ ಯಾವ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡಿದೆ ಮತ್ತು ಅವುಗಳ ಪೂರ್ಣ ಮಾಹಿತಿಗಳನ್ನು ದೂರುಗಾರರು ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ. ಇದನ್ನೆಲ್ಲಾ ಪರಿಗಣಿಸಿ ನ್ಯಾಯಾಲಯ ಮುಂದೂಡಿದೆ.