ಪೋಸ್ಟಲ್ ಸೇವಿಂಗ್ಸ್‌ನಿಂದ ಹಣ ಅವ್ಯವಹಾರ: ಮಹಿಳಾ ಪೋಸ್ಟ್ ಮಾಸ್ಟರ್ ವಿರುದ್ಧ ಕೇಸು

ಕಾಸರಗೋಡು: ಪೋಸ್ಟಲ್ ಸೇವಿಂಗ್ಸ್‌ನಲ್ಲಿ ಹಣ ಜಮಾ ಮಾಡದೆ ಅವ್ಯವಹಾರ ನಡೆಸಿದ ದೂರಿನಂತೆ ಮಹಿಳಾ ಪೋಸ್ಟ್ ಮಾಸ್ತರ್ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೆರ್ವತ್ತೂರು ತಿಮಿರಿ ಬ್ರಾಂಚ್ ಪೋಸ್ಟ್ ಮಾಸ್ತರ್ ಇ. ಸುಶೀಲ ಎಂಬವರ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ೨೦೨೦ ಅಗೋಸ್ತ್ ೨೩ರಿಂದ ೨೦೨೩ ಜನವರಿ ೧೬ರ ತನಕದ ಅವಧಿಯಲ್ಲಿ ೧೬ ಮಂದಿಯ ಹಣ ಖಾತೆಗೆ ಜಮಾ ಮಾಡದೆ ವಂಚಿಸಿರುವುದಾಗಿ ಆರೋಪಿಸಿ ನೀಲೇಶ್ವರ ಅಂಚೆ ಕಚೇರಿಯ ಸಬ್ ಡಿವಿಶನಲ್ ಇನ್‌ಸ್ಪೆಕ್ಟರ್  ಅಪರ್ಣಾ ರವಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಈ ಪ್ರಕರಣ ದಾಖಲಿಸಲಾಗಿದೆ.

RELATED NEWS

You cannot copy contents of this page