ಪ್ರತಿಭಟನೆಗೆ ಮಣಿದ ಸರಕಾರ: ರೇಶನ್ ವ್ಯಾಪಾರಿಗಳ ಮುಷ್ಕರ ಹಿಂತೆಗೆತ
ತಿರುವನಂತಪುರ: ವೇತನ ಹೆಚ್ಚಿಸಬೇಕು ಹಾಗೂ ಇತರ ಹಲವು ಬೇಡಿಕೆಗಳನ್ನು ಮುಂದಿರಿಸಿಕೊಂಡು ರೇಶನ್ ವ್ಯಾಪಾರಿಗಳ ಸಂಘಟನೆಗಳ ನೇತೃತ್ವದಲ್ಲಿ ರೇಶನ್ ವ್ಯಾಪಾರಗಳನ್ನು ಆರಂಭಿಸಿದ ಅನಿರ್ಧಿಷ್ಠಾವಧಿ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ವೇತನ ಹೆಚ್ಚಿಸಲಾಗುವುದೆಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರು ಭರವಸೆ ನೀಡಿದ್ದು, ಅದರಿಂದಾಗಿ ಮುಷ್ಕರ ಹಿಂತೆಗೆದುಕೊಳ್ಳುವ ತೀರ್ಮಾನಕ್ಕೆ ಬರಲಾಯಿತೆಂದು ರೇಶನ್ ವ್ಯಾಪಾರಿಗಳ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.