ಪ್ರತ್ಯೇಕ ಆಸನ ನೀಡದಿದ್ದಲ್ಲಿ ವಿಧಾನಸಭೆಯ ನೆಲದಲ್ಲೇ ಕುಳಿತುಕೊಳ್ಳುವೆನು- ಪಿ.ವಿ. ಅನ್ವರ್
ತಿರುವನಂತಪುರ: ವಿಧಾನಸಭೆ ಯಲ್ಲಿ ಪ್ರತ್ಯೇಕ ಆಸನ ಒದಗಿಸದಿದ್ದರೆ ನೆಲದಲ್ಲಿ ಕುಳಿತುಕೊಳ್ಳುವೆನೆಂದು ಶಾಸಕ ಪಿ.ವಿ. ಅನ್ವರ್ ತಿಳಿಸಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಇಂದು ಪಾಲ್ಗೊಳ್ಳುವುದಿಲ್ಲವೆಂದೂ, ಸ್ವತಂತ್ರ ಬ್ಲೋಕ್ ಬೇಕೆಂದು ಅವರು ಆಗ್ರಹಪಟ್ಟಿದ್ದಾರೆ. ವಿಧಾನಸಭೆಯಲ್ಲಿ ಸ್ವತಂತ್ರ ಬ್ಲೋಕ್ ಆಗಿ ಪ್ರತ್ಯೇಕ ಆಸನ ಮಂಜೂರು ಮಾಡುವುದರ ಬಗ್ಗೆ ಇಂದು ನಿರ್ಧಾರವಾಗದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತಾನು ನಾಳೆ ವಿಧಾನಸಭೆಯಲ್ಲಿ ಹಾಜರಿರುವುದಾಗಿಯೂ ಅವರು ತಿಳಿಸಿದ್ದಾರೆ. ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲವೆಂದು ಸ್ಪೀಕರ್‌ಗೆ ತಿಳಿಸಿದ್ದೇನೆ. ಆದ್ದರಿಂದ ಇನ್ನು ಕೂಡಾ ಆಸನ ನೀಡದಿದ್ದಲ್ಲಿ ನೆಲದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.