ಪ್ರತ್ಯೇಕ ರಾಜ್ಯ ಸ್ಥಾಪಿಸಲು ಸಂಚು: 14 ಉಗ್ರರ ಸೆರೆ

 

ನವದೆಹಲಿ: ಭಾರತದಲ್ಲಿ ಪ್ರತ್ಯೇಕ ‘ಖಲಿಫಾ’ ರಾಜ್ಯ ಸ್ಥಾಪಿಸುವ ಸಂಚು ಹೂಡಿರುವ ಅಲ್ ಖೈದಾ ಪ್ರೇರಿತ 14 ಮಂದಿ ಭಯೋತ್ಪಾದಕರನ್ನು ದೆಹಲಿ ಪೊಲೀಸರು ದೇಶದ ವಿವಿಧೆಡೆಗಳಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.

ಇವರನ್ನು ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ತೀವ್ರ ವಿಚಾರಣೆಗೊಳಪಡಿಸಿದಾಗ ಖಲೀಫತ್ ಸ್ಥಾಪನೆಯ ಉದ್ದೇಶವನ್ನು ಅವರು ಹೊಂದಿದ್ದರೆಂದು ಸ್ಪಷ್ಟಗೊಂಡಿದೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್ ಎಂಬೆಡೆಗಳಿಂದಾಗಿ ಈ ಉಗ್ರರನ್ನು ಸೆರೆ ಹಿಡಿಯಲಾಗಿದೆ.  ಉಗ್ರರ ಕಾರ್ಯಾಚರಣೆ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ನೀಡಿದ ಮಾಹಿತಿಯಂತೆ ಪೊಲೀಸರು ದೇಶದ ವಿವಿಧ ರಾಜ್ಯಗಳಲ್ಲಾಗಿ ೧೫ ಸ್ಥಳಗಳಲ್ಲಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ   ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಝಾರ್ಖಂಡ್ ರಾಂಚಿಯ ಡಾ. ಇಸ್ಟಿಯಾಕ್ ಎಂಬಾತ ಈ ಸಂಚಿನ ಮೊಡ್ಯೂಲ್‌ಗೆ ನೇತೃತ್ವ ನೀಡುತ್ತಿದ್ದಾನೆ. ಖಲೀಫತ್ (ಬಂಡಾಯ ಸಾರಿ ಭಾರತದಲ್ಲೇ ಪ್ರತ್ಯೇಕ ಮತೀಯ ರಾಜ್ಯ ಸ್ಥಾಪನೆ) ಘೋಷಿಸಲು ಹಾಗೂ ದೇಶದೊಳಗೆ ಗಂಭೀರ ಭಯೋತ್ಪಾದಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಸಂಚಿಗೂ ಈ ಭಯೋತ್ಪಾದಕ ಸಂಘಟನೆ ರೂಪು ನೀಡಿದೆ. ಸಂಘಟನೆಯ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ವಿವಿಧ ಉಗ್ರಗಾಮಿ ಚಟುವಟಿಕೆಗಳ ತರಬೇತಿ ನೀಡಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ವಶಪಡಿಸಲಾಗಿದೆ.  ಕಾರ್ಯಾಚರಣೆ  ಮುಂದುವರಿಯುತ್ತಿದ್ದು, ಅದರಂತೆ ಇತರ ರಾಜ್ಯಗಳ ಪೊಲೀಸರ ಸಹಾಯದಿಂದ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಮಾತ್ರವಲ್ಲ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ದಾಖಲುಪತ್ರಗಳನ್ನು ವಶಪಡಿಸಲು ಅಗತ್ಯದ ಎಲ್ಲಾ ಕ್ರಮಗಳನ್ನೂ ಪೊಲೀಸರು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page