ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ಯೋಜನೆಗೆ ಹಣ ವಸೂಲು ಮಾಡುವ ಆಸ್ಪತ್ರೆಗಳ ವಿರುದ್ಧ ಬಿಜೆಪಿ ಹೋರಾಟಕ್ಕೆ
ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಎರಡು ಬೃಹತ್ ಯೋಜನೆಯನ್ನು ಘೋಷಿಸುವ ಅಂಗವಾಗಿ ಈ ತಿಂಗಳ ೧೨ರಂದು ಕಾಸರಗೋಡಿಗೆ ಆಗಮಿಸುವ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜಿಲ್ಲೆಯಲ್ಲಿ ಅದ್ದೂರಿಯ ಸ್ವಾಗತ ನೀಡಿ ಅಭಿನಂದನೆ ಸಲ್ಲಿಸಲು ಮಂಡಲದ ಬಿಜೆಪಿ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಧಾನಮಂತ್ರಿ ಆಯಷ್ಮಾನ್ ಭಾರತ್ ಆರೋಗ್ಯ ಇನ್‌ಶೂರೆನ್ಸ್ ಯೋಜನೆಯಲ್ಲಿ ಪೂರ್ಣವಾಗಿ ಯೂ ಉಚಿತ ಚಿಕಿತ್ಸೆಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗಳು ಅನಧಿಕೃತವಾಗಿ ಚಿಕಿತ್ಸಾ ದರಗಳನ್ನು ವಸೂಲು ಮಾಡುವುದನ್ನು ಸಭೆ ಖಂಡಿಸಿದೆ. ಕಾನೂನು ವಿರುದ್ಧವಾದ ಇಂತಹ ಕ್ರಮಗಳಿಂದ ಸಂಬಂಪಟ್ಟವರು ಹಿಂಜರಿಯದಿದ್ದಲ್ಲಿ ತೀವ್ರವಾಗಿ ಪ್ರತಿಭಟಿಸಲು ಸಭೆ ನಿರ್ಧರಿಸಿದೆ. ಸಭೆಯಲ್ಲಿ ಪ್ರಮೀಳ ಮಜಲ್ ಅಧ್ಯಕ್ಷತೆ ವಹಿಸಿದರು. ಎನ್. ಮಧು, ಎಂ. ಉಮ, ಗೋಪಾಲಕೃಷ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಗುರುಪ್ರಸಾದ್ ಪ್ರಭು, ಸುಕುಮಾರ ಕುದ್ರೆಪ್ಪಾಡಿ ಮಾತನಾಡಿದರು.