ಪ್ರಧಾನಿಯನ್ನು ಅವಹೇಳನಗೈದ ಬಗ್ಗೆ ದೂರು: ಹೈಕೋರ್ಟ್‌ನ ಇಬ್ಬರು ಸಿಬ್ಬಂದಿಗಳ ಅಮಾನತು

ಕೊಚ್ಚಿ: ಗಣರಾಜ್ಯೋತ್ಸವ ದಿನ ವಾದ ನಿನ್ನೆ ರಾಜ್ಯ ಹೈಕೋರ್ಟ್‌ನಲ್ಲಿ ಪ್ರದರ್ಶಿಸಲ್ಪಟ್ಟ ನಾಟಕದಲ್ಲಿ ಭಾರತ ಮತ್ತು ಪ್ರಧಾನಮಂತ್ರಿಯವರು ಅವಹೇಳನಗೈಯ್ಯಲಾಗಿದೆ ಎಂದು ಆರೋಪಿಸಿ ನೀಡಲಾದ ದೂರಿನಂತೆ  ಹೈಕೋರ್ಟ್‌ನ ಅಸಿಸ್ಟೆಂಟ್ ರಿಜಿಸ್ಟ್ರಾರ್ ಟಿ.ಎ. ಸುಧೀಶ್ ಮತ್ತು ಕೋರ್ಟ್ ಕೀಪರ್ ಪಿ.ಎಂ. ಸುಧೀಶ್ ಎಂಬವರನ್ನು ತನಿಖಾ ವಿಧೇಯಗೊಳಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಇಬ್ಬರು ಸೇರಿ ಈ ನಾಟಕ ರಚಿಸಿದ್ದರು. ನಾಟಕದ ವಿರುದ್ಧ ಲೀಗಲ್ ಸೆಲ್ ಮತ್ತು ಭಾರತೀಯ ಅಭಿಅಭಾಷಕ (ನ್ಯಾಯವಾದಿ) ಪರಿಷತ್  ದೂರು ನೀಡಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಇಬ್ಬರು ಸಿಬ್ಬಂದಿಗಳನ್ನು ಕೊನೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಜ್ಯಾರಿಗೊಳಿಸಿದ್ದಾರೆ. ‘ಒನ್ ನೇಷನ್, ಒನ್ ಮಿಷನ್ ಒನ್ ಇಂಡಿಯಾ’ ಎಂಬ ಹೆಸರಲ್ಲಿ ಒಂದು ಗಂಟೆ ಅವಧಿಯ ಈ ನಾಟಕ ನಿನ್ನೆ ಪ್ರದರ್ಶಿಸಲಾಗಿತ್ತು. ಅದರಲ್ಲಿ ದೇಶ ಮತ್ತು ಪ್ರಧಾನಮಂತ್ರಿಯವರನ್ನು ಅವಹೇಳನಗೈಯ್ಯುವ ರೀತಿಯ ಅಂಶಗಳು ಒಳಪಡಿಸಲಾಗಿದೆ. ಮಾತ್ರವಲ್ಲ ಪ್ರಧಾನಮಂತ್ರಿಯವರ ಅದೇ ದಾಟಿಯ ಮಾತಿನ ಪ್ರಯೋಗ ರೀತಿ ಬಳಸಲಾಗಿತ್ತು. ಕೇಂದ್ರ ಸರಕಾರ ಯೋಜನೆಗಳು ಮಾತ್ರವಲ್ಲ ಭಾರತದ ಸ್ವಾತಂತ್ರ್ಯದ ಅಮೃತ ವರ್ಷಾಚರಣೆ ಯನ್ನು ಅವಹೇಳನಗೈಯ್ಯಲಾಗಿದೆ ಎಂದು ಹೈಕೋರ್ಟ್‌ನಲ್ಲಿ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ. ಹೈಕೋರ್ಟ್ ಸಿಬ್ಬಂದಿಗಳು ಮತ್ತು ಅಡ್ವಕೇಟ್ ಜನರಲ್ ಕಚೇರಿಯ ಸಿಬ್ಬಂದಿಗಳು ಸೇರಿ ಈ ನಾಟಕ ಪ್ರದರ್ಶಿಸಿದ್ದರು.

Leave a Reply

Your email address will not be published. Required fields are marked *

You cannot copy content of this page