ಪ್ರಯಾಣಿಕನನ್ನು ರಕ್ಷಿಸಿದ ಕಾಸರಗೋಡು ಪೊಲೀಸಗೆ ಅಭಿನಂದನೆ
ಕಣ್ಣೂರು: ರೈಲು ನಿಲ್ದಾಣ ಹಾಗೂ ರೈಲಿನ ಪ್ಲಾಟ್‌ಫಾರ್ಮ್ ಮಧ್ಯೆ ಮರಣವನ್ನು ಎದುರು ನೋಡುತ್ತಿದ್ದ ಪ್ರಯಾಣಿಕನನ್ನು ಬದುಕಿಗೆ ಕೈ ಹಿಡಿದು ಎತ್ತಿದ ಕಾಸರಗೋಡು ಪೊಲೀಸ್ ಅಧಿಕಾರಿಗೆ ಅಭಿನಂದನೆ ಪ್ರವಾಹ ಸೋಮವಾರ ಸಂಜೆ ೪.೪೫ಕ್ಕೆ ಘಟನೆ ನಡೆದಿದೆ. ಎಕ್ಸ್‌ಪ್ರೆಸ್ ಕಣ್ಣೂರು ರೈಲ್ವೇ ನಿಲ್ದಾಣದ 3ನೇ ಪ್ಲಾಟ್‌ಫಾರ್ಮ್‌ನಿಂದ ಹೊರಡಲು ಆರಂಭಿಸಿದಾಗ ರೈಲಿಗೆ ಓಡಿ ಹತ್ತಲೆತ್ನಿಸಿದ ಕನ್ಯಾಕುಮಾರಿ ನಿವಾಸಿ ಶೈನ್‌ರಿಗೆ ಅಪಾಯ ಸಂಭವಿಸಿತ್ತು. ಲಗೇಜ್‌ನ ಭಾರದಿಂದಾಗಿ ಬ್ಯಾಲೆನ್ಸ್ ತಪ್ಪಿ ಪ್ಲಾಟ್‌ಫಾರ್ಮ್ ಹಾಗೂ ರೈಲಿನ ಮಧ್ಯೆ ಇವರು ಬಿದ್ದರು. ಜನರು ಬೊಬ್ಬಿಡುತ್ತಿದ್ದ ಮಧ್ಯೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಕಾಸರಗೋಡು ರೈಲ್ವೇ ನಿಲ್ದಾಣದ ಸಿಪಿಒ ಪ್ರವೀಣ್ ಪೀಟರ್ ಅಲ್ಲಿಗೆ ತಲುಪಿ ಶೈನ್‌ರನ್ನು ಎಳೆದು ಮೇಲೆ ಹತ್ತಿಸಿದರು. ಅದೃಷ್ಟವಶಾತ್ ಶೈನ್ ಗಾಯಗಳಿಲ್ಲದೆ ಪಾರಾಗಿದ್ದಾರೆ. ಸಾಹಸಿಕವಾಗಿ ಪ್ರಯಾಣಿಕರನ್ನು ರಕ್ಷಿಸಿದ ಪ್ರವೀಣ್‌ರಿಗೆ ಅಭಿನಂದನೆ ಪ್ರವಾಹ ಉಂಟಾಗಿದೆ.