ಪ್ರಾಕೃತಿಕ ವಿಕೋಪಕ್ಕೆ ಕಾಸರಗೋಡಿನ ವಿದ್ಯಾರ್ಥಿ ಸೇರಿ 8 ಮಂದಿ ಸಾವು
ಕಾಸರಗೋಡು: ಮುಂಗಾರು ಮಳೆ ಒಂದೆರಡು ದಿನಗಳಗಾಗಿ ಕೇರಳಕ್ಕೆ ಪ್ರವೇಶಿಸಲಿರುವಂತೆಯೇ ಇನ್ನೊಂದೆಡೆ ರಾಜ್ಯದಲ್ಲಿ ಸುರಿಯುತ್ತಿರುವ ಬೇಸಿಗೆ ಮಳೆ ಇನ್ನಷ್ಟು ತೀವ್ರಗೊಂಡಿದ್ದು ಅದು ಸೃಷ್ಟಿಸಿದ ಪ್ರಾಕೃತಿಕ ವಿಕೋಪಕ್ಕೆ ಕಾಸರಗೋಡಿನ ಬಾಲಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ೮ ಮಂದಿ ಬಲಿಯಾಗಿದ್ದಾರೆ.
ಹೊಸದುರ್ಗ ಅರಯಿ ವಟ್ಟತ್ತೋ ಡಿನ ಬಾಕೋಟ್ ಹೌಸ್‌ನ ಬಿ.ಕೆ. ಅಬ್ದುಲ್ಲ ಕುಂಞಿ-ಕಂಸಿಯಾ ದಂಪತಿ ಪುತ್ರ, ಪ್ಲಸ್‌ವನ್ ವಿದ್ಯಾರ್ಥಿ ಬಿ.ಕೆ. ಮೊಹಮ್ಮದ್ ಸಿನಾನ್ (16), ತಿರುವನಂತಪುರ ಮೊದಲಪೊಯಿಲ್ ಅಂಜುತೆಂಗು ನಿವಾಸಿ ಎಬ್ರಹಾಂ ರೋ ಬರ್ಟ್ (60), ಆಲಪ್ಪುಳ ಕಾರಪುಳದ ಬಿ. ಅರವಿಂದನ್ (30), ಎರ್ನಾಕುಳಂ ಐಕರಕುಡಲಿಯಿಲ್ ಎಲ್ದೋಸ್ (16), ಕೋಟ್ಟಯಂ ಚೆಂಬು ನಿವಾಸಿ ಸದಾನಂದ (84), ಆಲಪ್ಪುಳ ನಿವಾಸಿ ಪ್ರಸಾದ್, ಇಡುಕ್ಕಿಯ ಮರಯೂರ್ ಚೆಂಬಕುಳಂನ ರಾಜನ್ (76), ತಿರುವನಂತಪುರ ಮುಕ್ಕಾಲ್‌ನ ಕೆ. ಅಶೋಕನ್ ಎಂಬವರು ಪ್ರಾಕೃತಿಕ ವಿಕೋಪಕ್ಕೆ ಬಲಿಯಾದ ದುರ್ದೈವಿಗಳು.
ಹೊಸದುರ್ಗ ಅರಯಿಯ ಮೊಹಮ್ಮದ್ ಸಿನಾನ್ ತನ್ನ ಸ್ನೇಹಿತರ ಜತೆಗೆ ನಿನ್ನೆ ಅಪರಾಹ್ನ ಅರಾಯಿ ಹೊಳೆಯ ಮುಳಿಯಕ್ಕಾಲ್‌ನಲ್ಲಿ ಸ್ನಾನಕ್ಕಿಳಿದಾಗ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದನು. ಊರವರು ಮತ್ತು ಅಗ್ನಿಶಾಮಕದಳ ನಡೆಸಿದ ವ್ಯಾಪಕ ಶೋಧದಲ್ಲಿ ಆತನನ್ನು ಅಲ್ಲೇ ಪಕ್ಕದಲ್ಲಿ ಪತ್ತೆಹಚ್ಚಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಣ್ಣೂರು ವೆಟ್ಟಿಕುಳ ಸಹಬ ಇಸ್ಲಾಮಿಕ್ ಅಕಾಡೆ ಮಿಯ ಪ್ಲಸ್‌ವನ್ ವಿದ್ಯಾರ್ಥಿಯಾ ಗಿರುವ ಮೃತ ಸಿನಾನ್ ಹೆತ್ತವರ ಹೊರತಾಗಿ ಸಹೋದರಿಯರಾದ ಹರ್ಷಾನಾ, ಅಫ್ರೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.
ಎಬ್ರಹಾಂ ರೋಬರ್ಟ್ ತಿರುವ ನಂತಪುರದ ಮುದಲ ಕುಳಿಯಿಲ್‌ನಲ್ಲಿ ದೋಣಿ ಮಗುಚಿಬಿದ್ದು ಪ್ರಾಣ ಕಳೆದುಕೊಂ ಡಿದ್ದಾರೆ. ಅರವಿಂದಾಕ್ಷನ್ ಆಲಪ್ಪುಳದಲ್ಲಿ ನಿನ್ನೆ ನಡೆದುಕೊಂಡು ಹೋಗುತ್ತಿದ್ದ ವೇಳೆ ತೆಂಗಿನ ಮರ ಅವರ ಮೇಲೆ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಎಲ್ದೋಸ್ ಎರ್ನಾಕುಳಂ ಬೇಂಙರದ ತೋಡಿನಲ್ಲಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಅದು ಆತನ ಪ್ರಾಣ ಅಪಹರಿಸಿದೆ.
?ಸದಾನಂದನ್ ಕೋಟ್ಟಯಂ ವೆಂಬನಾಟ್ಟ್ ಹಿನ್ನೀರಿನಲ್ಲಿ ದೋಣಿ ಯಿಂದ ಬಿದ್ದು ಪ್ರಾಣ ಕಳೆದುಕೊಂ ಡಿದ್ದಾರೆ. ರಾಜನ್ ಹೊಳೆಗೆ ಬಿದ್ದು ಪ್ರಾಣ ಕಳೆದುಕೊಂಡರೆ ಇನ್ನು ಪ್ರಸಾದ್ ಕಾರಿನಲ್ಲಿ ಬರುತ್ತಿದ್ದ ವೇಳೆ ಸುರಿದ ಧಾರಾಕಾರ ಮಳೆಗೆ ಸರಿಯಾಗಿ ದಾರಿ ಗೋಚರಿಸದೆ ಕಾರು ರಸ್ತೆ ಬಳಿ ನಿಲ್ಲಿಸಲಾ ಗಿದ್ದ ಲಾರಿಗೆ ಢಿಕ್ಕಿ ಹೊಡೆದು ಅವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಶೋಕನ್ ಮೊನ್ನೆ ಮನೆ ಪಕ್ಕದ ತೋಡಿಗೆ ಬಿದ್ದು, ನೀರಿನ ಸೆತಕ್ಕೊಳ ಗಾಗಿ ನಾಪತ್ತೆಯಾಗಿದ್ದರು. ನಿನ್ನೆ ಅವರ ಮೃತದೇಹ ಪತ್ತೆಯಾಗಿದೆ.
ಇದರ ಹೊರತಾಗಿ ಧಾರಾಕಾರ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ನಾಶನಷ್ಟ ಉಂಟಾಗಿದೆ. ಹಲವೆಡೆಗಳಲ್ಲಿ ಮನೆಗಳು ಕುಸಿದುಬಿದ್ದಿವೆ. ವ್ಯಾಪಕ ಕೃಷಿ ನಾಶವೂ ಉಂಟಾಗಿದೆ. ತಗ್ಗುಪ್ರದೇಶ ನೀರಿನಿಂದಾ ವೃತ ವಾಗಿದೆ. ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ಮೇಘ ಸ್ಪೋಟ ವುಂಟಾಗಿ ಜಡಿಮಳೆ ಸುರಿದು ಭಾರೀ ಪ್ರವಾಹವೇ ಉಂಟಾಗಿದೆ. ಧಾರಾಕಾರ ಮಳೆ ಇನ್ನೂ ಸುರಿಯುತ್ತಿದ್ದು, ಅದರಿಂದಾಗಿ ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಹಾಗೂ ತಿರುವನಂತಪುರ, ಕೊಲ್ಲಂ, ತೃಶೂರು ಮತ್ತು ಇಡುಕ್ಕಿ ಜಿಲ್ಲೆಗಳಲ್ಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳ ಮಲೆನಾಡು ಪ್ರದೇಶಗಳಲ್ಲಿ ಭೂಕುಸಿತದ ಬೆದರಿಕೆಯುಂಟಾಗಿದ್ದು ಜಾಗ್ರತಾ ನಿರ್ದೇಶ ನೀಡಲಾಗಿದೆ. ಧಾರಾಕಾರ ಮಳೆ ಹಾಗೂ ಪ್ರಾಕೃತಿಕ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ವಿಮಾನ ದಾರಿಯ ಗತಿ ಯನ್ನೂ ಬದಲಾಯಿಸಲಾಗುತ್ತಿದೆ. ದುಬಾಯಿಯಿಂದ ಬಂದ ಎಮಿರೈಟ್, ಕುವೈತ್‌ನಿಂದ ಬಂದ ಏರ್‌ವೇಸ್, ದೋಹಾದಿಂದ ಬಂದ ಕತ್ತರ್ ಏರ್‌ವೇಸ್ ಮತ್ತು ದುಬಾಯಿಯಿಂದ ಬಂದ ಇಂಡಿಗೋ ವಿಮಾನಗಳನ್ನು ಧಾರಾಕಾರ ಮಳೆಯಿಂದಾಗಿ ತಿರುವನಂತಪುರದಲ್ಲಿ ಇಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವುಗಳ ಗತಿ ಬದಲಾಯಿಸಿ ಕೊಚ್ಚಿನೆಡುಂಬಾಶ್ಶೇರಿ ನಿಲ್ದಾಣದಲ್ಲಿ ಇಳಿಸಬೇಕಾಗಿ ಬಂದಿದೆ. ಹವಾಮಾನ ಇಲಾಖೆಯ ಮುಂದಿನ ಸೂಚನೆ ಪ್ರಕಾರ ವಿಮಾನ ಸೇವೆಗಳನ್ನು ಮರುಕ್ರಮೀಕರಿಸಲಾಗು ವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.