ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಯುವತಿ ವರ್ಷದ ಬಳಿಕ ಪ್ರಕರಣ ಬಯಲು, ಆರೋಪಿಗಳ ಸೆರೆ

ದಾವಣಗೆರೆ: ವರ್ಷದ ಹಿಂದೆ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆ ಎಂಬ ಶಂಕೆಯಿಂದ ಪ್ರಿಯತಮನ ಜೊತೆ ಸೇರಿ ಪತಿಯನ್ನು ಕೊಲೆಗೈದಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ದಾವಣಗೆರೆ ಚೆನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಇಲ್ಯಾಸ್ ಅಹಮ್ಮದ್‌ನನ್ನು ಕೊಲೆಗೈಯ್ಯಲಾಗಿದೆ.

2023 ಫೆಬ್ರವರಿಯಲ್ಲಿ ಮಲೆಬೆ ನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ನಾಪತ್ತೆ ಯಾಗಿದ್ದ ಇಲ್ಯಾಸ್ ಅಹಮ್ಮದ್‌ರ ಮೃತದೇಹ ಇದಾಗಿರಬಹುದೆಂದು ಪೊಲೀಸರು ಶಂಕಿಸಿದ್ದರು. ಈ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಮೃತ ವ್ಯಕ್ತಿ ಇಲ್ಯಾಸ್ ಅಹಮ್ಮದ್ ಎಂದು ಖಚಿತಪಡಿಸಲಾಯಿತು. ಪತಿ ಇಲ್ಯಾಸ್‌ಗೆ ನಿದ್ದೆ ಮಾತ್ರೆ ಹಾಕಿ ಪತ್ನಿ ಆಯಿಷಾ ಪ್ರಿಯತಮ ಮಂಜುನಾಥ್ ನೊಂದಿಗೆ ಅನೈತಿಕ ಸಂಪರ್ಕ ಹೊಂ ದಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧಕ್ಕೆ ಪತಿ ಅಡ್ಡಿಯಾಗು ವನೆಂದು ತಿಳಿದು ಇಲ್ಯಾಸ್‌ನನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ನೀಡಲಾಗಿತ್ತು. ಬಳಿಕ ನದಿಗೆ ಈಜಲು ಕರೆದುಕೊಂಡು ಹೋಗಿ ಅಲ್ಲಿ ಕೊಲೆಮಾಡಲಾಗಿತ್ತು. ಇಲ್ಯಾಸ್ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಕುಟುಂಬಸ್ಥರು ದೂರು ನೀಡಿದ್ದರು. ಆ ಬಳಿಕ ನಡೆಸಿದ ತನಿಖೆಯಲ್ಲಿ ಇಲ್ಯಾಸ್ ಪತ್ನಿ ಹಾಗೂ ಪ್ರಿಯತಮ ಕೊಲೆ ಆರೋಪಿಗಳೆಂದು ಪೊಲೀಸರು ದೃಢೀಕರಿಸಿದ್ದಾರೆ. ಇವರ ವಿರುದ್ಧ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

You cannot copy contents of this page