ಪ್ರೇಮ್ ನಸೀರ್‌ರ ಪುತ್ರ, ನಟ ಶಾನವಾಸ್ ನಿಧನ
ಕೊಚ್ಚಿ: ಖ್ಯಾತ ಸಿನಿಮಾ ನಟನಾಗಿದ್ದ ಪ್ರೇಮ್ ನಸೀರ್‌ರ ಪುತ್ರ, ನಟ ಶಾನವಾಸ್ (71) ನಿಧನ ಹೊಂದಿದರು. ಮಲೆಯಾಳ, ತಮಿಳು ಸಿನಿಮಾಗಳಲ್ಲಾಗಿ ಒಟ್ಟು 96ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಾಲಚಂದ್ರ ಮೆನೋನ್ ನಿರ್ದೇಶಿಸಿದ ‘ಪ್ರೇಮಗೀತಂಙಳ್’ ಮೂಲಕ ಸಿನಿಮಾರಂಗ ಪ್ರವೇಶಿಸಿದ್ದರು. ‘ಜನಗಣಮನ’ದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಹಲವಾರು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಪತ್ನಿ ಆಯಿಷಾ ಬೀವಿ ಹಾಗೂ ಮಕ್ಕಳಾದ ಅಜಿತ್ ಶಾನ್, ಶಮೀರ್ ಖಾನ್, ಸೊಸೆ ಹನ, ಸಹೋದರಿಯರಾದ ಲೈಲಾ, ರಸಿಯಾ, ರೀತಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.