ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಾಲೂಕು ಸಮಿತಿ ನೂತನ ಕಚೇರಿ ಉದ್ಘಾಟನೆ

ಕಾಸರಗೋಡು: ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಸಮಿತಿಯ ನೂತನ ಕಚೇರಿಯನ್ನು ಕಾಸರಗೋಡು ನಗರಸಭಾ ಕಾಂಪ್ಲೆಕ್ಸ್‌ನಲ್ಲಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಉದ್ಘಾಟಿಸಿದರು. ಅಧ್ಯಕ್ಷ ಎಂ.ಎ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ಮುಖ್ಯ ಅತಿಥಿಯಾಗಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣನ್ ನಂಬ್ಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಲಕ್ಷ್ಮಣನ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಕೋಶಾಧಿಕಾರಿ ಪಿ.ಎ. ಮುಹಮ್ಮದ್ ಕುಂಞಿ, ಸಿ. ರವಿ, ಧನ್‌ರಾಜ್ ಮಂಜೇಶ್ವರ, ಗಿರಿಕೃಷ್ಣನ್, ಕೆ.ಸಿ. ಇರ್ಷಾದ್, ಪಿ.ಎಸ್. ನಾಸರ್, ತಂಬಾನ್ ನಾಯರ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸಿ.ಎ. ಮುಹ ಮ್ಮದ್ ಕುಂಞಿ ಸ್ವಾಗತಿಸಿ, ಕೋಶಾ ಧಿಕಾರಿ ರಾಧಾಕೃಷ್ಣನ್ ವಂದಿಸಿದರು.

RELATED NEWS

You cannot copy contents of this page