ಪ್ಲಸ್ಟು ಅಂಕಪಟ್ಟಿಯಲ್ಲಿ ವ್ಯಾಪಕ ತಪ್ಪುಗಳು: ಸಮಗ್ರ ತನಿಖೆಗೆ ಆದೇಶ
ತಿರುವನಂತಪುರ: ಪ್ಲಸ್ಟು ಅಂಕಪಟ್ಟಿ ಮುದ್ರಣದಲ್ಲಿ ವ್ಯಾಪಕ ತಪ್ಪುಗಳು ಉಂಟಾಗಿದ್ದು, ಆ ಬಗ್ಗೆ ಸಮಗ್ರ ತನಿಖೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ನಿರ್ದೇಶ ನೀಡಿದ್ದಾರೆ. ನಾಲ್ಕುಲಕ್ಷದಷ್ಟು ಪ್ಲಸ್ಟು ಅಂಕಪಟ್ಟಿ ಮುದ್ರಿಸಲಾಗಿದ್ದು ಅದರಲ್ಲಿ 10,೦೦೦ ಅಂಕಪಟ್ಟಿಯಲ್ಲಿ ತಪ್ಪುಗಳು ಪತ್ತೆಯಾಗಿವೆ. ಇದರಲ್ಲಿ ಅಂಕಗಳನ್ನೂ ತಪ್ಪಾಗಿ ಮುದ್ರಿಸಲಾಗಿದೆ. ಹೀಗೆ ತಪ್ಪುಗಳು ಪತ್ತೆಯಾದ ಅಂಕಪಟ್ಟಿ ಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಹೈಯರ್ ಸೆಕೆಂಡರಿ ಪರೀಕ್ಷಾ ವಿಭಾಗದ ಜಂಟಿ ಕಾರ್ಯದರ್ಶಿ ಡಾ. ಕೆ. ಮಾಣಿಕ್ಯರಾಜ್ ಸಂಬಂಧಪಟ್ಟ ಹೈಯರ್ ಸೆಕೆಂಡರಿ ಶಾಲೆಗಳ ಪ್ರಾಂಶುಪಾಲರಿಗೆ ನಿರ್ದೇಶ ನೀಡಿದ್ದಾರೆ.ಪ್ಲಸ್ಟು ಅಂಕ ಪಟ್ಟಿಗಳನ್ನು ಮುದ್ರಿಸಿರುವ ಮುದ್ರಾಣಾ ಲಯವನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಫೆಡರೇಶನ್ ಆಫ್ ಹೈಯರ್ ಸೆಕೆಂಡರಿ ಟೀಟರ್ಸ್ ಅಸೋಸಿಯೇ ಶನ್ ಆಗ್ರಹಪಟ್ಟಿದೆ. ಇದರಿಂದ ಮುದ್ರಣಾ ಇಲಾಖೆ ಮತ್ತು ಸರಕಾರಕ್ಕೆ ನಷ್ಟ ಉಂಟು ಮಾಡಿರುವುದರಿಂದಾಗಿ ಸ್ಪಷ್ಟೀಕರಣೆ ನೀ ಡುವ ನೋಟೀಸನ್ನು ಜ್ಯಾರಿಗೊಳಿಸಬೇ ಕೆಂದೂ ಇತರ ವಿವಿಧ ಸಂಘಟನೆಗಳು ಆಗ್ರಹಪಟ್ಟಿವೆ.